ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ರಬಕವಿ-ಬನಹಟ್ಟಿ,ಸೆ24: ಭೂ ಸುಧಾರಣೆ ತಿದ್ದುಪಡಿ ಕಾಯ್ದೆನ್ನ ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ರಾಜ್ಯ ಹೆದ್ದಾರಿ ಜಮಖಂಡಿ-ಕುಡಚಿ ರಸ್ತೆಯಲ್ಲಿರುವ ಪಟ್ಟಣದ ಗಾಂಧಿ ವೃತ್ತದಲ್ಲಿ ಗುರುವಾರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮಾತನಾಡಿದ ದುಂಡಪ್ಪ ಕುಡಚಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತಸಂಘದಿಂದ ಚಳುವಳಿ ನಡೆಯುತ್ತಿದೆ. ಈ ತಿದ್ದುಪಡಿಯಿಂದ ರೈತಕುಲಕ್ಕೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾರಕವಾಗಿ ಪರಿಣಮಿಸುವ ಕಾಯ್ದೆಯನ್ನು ತರಾತುರಿಯಲ್ಲಿ ವಿಧಾನಸೌಧದಲ್ಲಿ ಯಾವದೇ ಚರ್ಚೆಗಳನ್ನು ಮಾಡದೇ ರೈತರ ಅನಾದಿಕಾಲದ ಹೋರಾಟವಾದ ರೈತ ಬೆಳೆದ ಖಾಯಂ ಬೆಲೆಯನ್ನು ಕಟ್ಟುವಂತಹ ಕಾಯ್ದೆಗಳನ್ನು ಜಾರಿಗೊಳಿಸದೇ, ರೈತನ ಕೂಹಿಡಿದು ಎತ್ತುವಂತಹ ಕಾಯ್ದೆಗಳನ್ನು ಜಾರಿಗೊಳಿಸದೇ, ಮನೆಮಠಗಳನ್ನು ಮರಿಕೊಂಡು ರೈತ ಸಮುದಾಯವನ್ನೇ ನಿರ್ಮೂಲನೆ ಮಾಡುವಂತಹ ಕಾಯ್ದೆಗಳನ್ನು ತರಾತುರಿಯಲ್ಲಿ ಮಂಡಿಸುತ್ತಿರುವ ನಿಮ್ಮ ಸರ್ಕಾರಕ್ಕೆ ಧಿಕ್ಕಾರವೆಂದು ಕೂಗಿದರು.
ಕೊರೊನಾ ಪರಿಸ್ಥಿತಿ ಮತ್ತು 144 ಇರುವದರ ದುರ್ಲಾಭ ಪಡೆದುಕೊಂಡು ಕಾರ್ಪೋರೇಟ್ ಕಂಪನಿಗಳ, ರಿಯಲ್ ಎಸ್ಟೇಟ್ ಕಂಪನಿಗಳ ಬೃಹತ್ ಕೈಗಾರಿಕಾ ಕಂಪನಿಗಳ ಏಜೆಂರಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಇದರ ಬಗ್ಗೆ ಕಾಟಾಚಾರದ ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಕಾರ್ಯರೂಪದಲ್ಲಿ ಯಾವದೇ ಹೋರಾಟವನ್ನು ಮಾಡದೇ ಇರುವ ವಿರೋಧ ಪಕ್ಷದ ವಿರುದ್ಧವೂ ದೀರ್ಘಕಾಲದ ಹೋರಾಟವನ್ನು ರಸ್ತೆ ತಡೆ ಚಳವಳಿ ಮಾಡುವದರ ಮೂಲಕ ನಮ್ಮ ಹೋರಾಟ ಮಾಡುತ್ತೇವೆ ಎಂದರು.
ಇದೇ ಸಂದರ್ಭ ರೈತ ಮುಖಂಡರಾದ ಸಿದ್ದು ಉಳ್ಳಾಗಡ್ಡಿ, ಯಮನಪ್ಪ ಜಗದಾಳ, ನಾಗಪ್ಪ ಬಂದೇನ್ನವರ, ಅಯ್ಯಪ್ಪ ಹುಂಡರಗಿ, ಯಲ್ಲಪ್ಪ ಶೇಗುಣಸಿ, ಶ್ರೀಶೈಲ ಯಂಡೆತ್ತಿ, ಬಸು ಸಾವ್ವಗೋಳ, ರೇವಪ್ಪ ನಾಗನೂರ, ಮಾಳಪ್ಪ ಆಲಕನೂರ, ಮಾದೇವ ಕರಿಗಾರ ಸೇರಿದಂತೆ ಅನೇಕರಿದ್ದರು.

Social Plugin