ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಹಾಗೂ ಸಂಸದ ಸುರೇಶ ಅಂಗಡಿ ನಿಧನಕ್ಕೆ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರು ಶೃದ್ಧಾಂಜಲಿ ಸಲ್ಲಿಸಿದರು. 


ಬಾಗಲಕೋಟೆ ಜಿಲ್ಲೆಗೂ ಅಂಗಡಿಗೂ ಬಿಡಿಸಲಾಗದ ನಂಟು-ಸವದಿ

ರಬಕವಿ-ಬನಹಟ್ಟಿ,ಸೆ24:ನಗರದ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಹಾಗೂ ಸಂಸದ ಸುರೇಶ ಅಂಗಡಿ ನಿಧನಕ್ಕೆ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರು ಶೃದ್ಧಾಂಜಲಿ ಸಲ್ಲಿಸಿದರು. 

ಇದಕ್ಕೂ ಪೂರ್ವ ಶಾಸಕ ಸಿದ್ದು ಸವದಿ ಮಾತನಾಡಿ, ಸಂಸದ ಸುರೇಶ ಅಂಗಡಿಯವರು ಬೆಳಗಾವಿ ಜಿಲ್ಲೆಯ ಸಂಸದರಾಗಿದ್ದರೂ ಸಹಿತ ಬಾಗಲಕೋಟೆ ಜಿಲ್ಲೆಗೆ ಹೆಚ್ಚಿನ ಸಂಪರ್ಕದಲ್ಲಿದ್ದವರು. ಸದ್ವಿನಯ ಹಾಗು ಪ್ರಾಮಾಣಿಕ ರಾಜಕಾರಣಿಯಾಗಿ ಸತತ 4 ಬಾರಿ ಸಂಸದರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರದಾಗಿತ್ತು. ಇಂತಹ ಸಣ್ಣ ವಯಸ್ಸಿನಲ್ಲಿ ಮರೆಯಾಗಿದ್ದು ತುಂಬ ನೋವು ತರುವಂಥದ್ದು ಎಂದರು.

ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಓಬಿಸಿ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಮಾತನಾಡಿ, ಒಬ್ಬ ಸರಳ ಸಜ್ಜನ ರಾಜಕಾರಣಿಯನ್ನು ಪಕ್ಷ ಕಳೆದುಕೊಂಡಂತಾಗಿದ್ದು, ಅವರ ಅಗಲಿಕೆ ಉತ್ತರಕರ್ನಾಟಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. 

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸೂರ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಕಾರ್ಯದರ್ಶಿ ಆನಂದ ಕಂಪು, ಜಿ. ಪಂ. ಸದಸ್ಯ ಪರಶುರಾಮ ಬಸವ್ವಗೋಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈಶ್ವರ ನಾಗರಾಳ ವೇದಿಕೆ ಮೇಲಿದ್ದರು. 

ಕಾರ್ಯಕ್ರಮದಲ್ಲಿ ಶ್ರೀಶೈಲ ಬೀಳಗಿ, , ಸಂಜಯ ತೆಗ್ಗಿ, ಮಹಾದೇವ ಕೋಟ್ಯಾಳ, ಶಿವಾನಂದ ಕಾಗಿ, ಬಸವರಾಜ ಅಮ್ಮಣಗಿಮಠ, ರವಿ ಕೊರ್ತಿ, ಶ್ರೀಶೈಲ ಭಾವಿಕಟ್ಟಿ, ಈರಣ್ಣ ಚಿಂಚಖಂಡಿ, ಸುವರ್ಣ ಕೊಪ್ಪದ, ರಮೇಶ ಮಂಡಿ, ಪ್ರಭು ಪೂಜಾರಿ, ಶಿವು ಗುಂಡಿ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಸುವರ್ಣ ಕೊಪ್ಪದ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕಣ್ಣವರ, ಶಂಕರ ಅಂಗಡಿ, ಅಶೋಕ ಹಳ್ಳೂರ, ಶಂಕರ ಕುರಂದವಾಡ, ಭೀಮಸಿ ಪಾಟೀಲ ಸೇರಿದಂತೆ ಅನೇಕರು ಇದ್ದರು.