ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಲಾಯಿತು.
ಮಾಸ್ಕ್ ಕಡ್ಡಾಯ ಬಳಕೆ ನಿರಂತರವಾಗಿರಲಿ ರಬಕವಿ-ಬನಹಟ್ಟಿ,ಸೆ14: ಕೊರೊನಾ ಮಹಾಮಾರಿ ಇನ್ನೂ ಕಡಿಮೆಯಾಗಿಲ್ಲ. ಭಯದಿಂದ ಮಾತ್ರ ಜನತೆ ಮುಕ್ತಿ ಹೊಂದಿದ್ದಾರೆ ಹೊರತು ರೋಗ ಹರಡುವಿಕೆಯಂದಲ್ಲವೆಂದು ಜೆ.ಯು.ಎಂ. ಫೌಂಡೇಶನ್ ಮುಖ್ಯಸ್ಥ ಜೆ.ಯು. ಮೊಹಮ್ಮದ್ ಹೇಳಿದರು. ನಗರದ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಈಚೆಗೆ ದರ್ಶನಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಉಚಿತ ಮಾಸ್ಕ್ ವಿತರಣೆ ಸಂದರ್ಭ ಮಾತನಾಡಿದ ಅವರು, ನಿರಂತರ ಮಾಸ್ಕ್‍ಗಳ ಬಳಕೆ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳಲ್ಲಿ ಯಾವದೇ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವದು ಸಹಜವಾಗುತ್ತಿದೆ. ಅಲ್ಲದೆ ದೇವಸ್ಥಾನಗಳಲ್ಲಿಯೂ ದರ್ಶನಕ್ಕೆ ಆಗಮಿಸುವ ಜನತೆ ಮಾಸ್ಕ್ ಬಳಕೆ ಮಾಡುತ್ತಿಲ್ಲ. ಕಡ್ಡಾಯ ಮಾಸ್ಕ್‍ದಿಂದ ಕೊರೊನಾದಿಂದ ದೂರ ಉಳಿಯಲು ಸಾಧ್ಯವೆಂದರು. ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಹಾಗು ಡಾ. ಎಸ್.ಜಿ. ಸಾಬೋಜಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಂಗಳವಾರ ಪೇಟೆ ದೈವ ಮಂಡಳಿ ಚೇರಮನ್ ಶ್ರೀಶೈಲ ದಭಾಡಿ, ಬಸವರಾಜ ಜಾಡಗೌಡ, ದಾನಪ್ಪ ಹುಲಜತ್ತಿ, ರುದ್ರಪ್ಪ ಹಿಪ್ಪರಗಿ, ಪಂಡಿತ ಹಣಗಂಡಿ, ಶಾಹೀದ್ ಹೊಂಬರ್ಡೆ ಉಪಸ್ಥಿತರಿದ್ದರು.
Social Plugin