ಸೆ.೧೪ ರಂದು ಹಿಂದಿ ಸಪ್ತಾಹ ವಿರೋಧಿಸಿ ಕರವೇ ಮನವಿ.
ರಬಕವಿ ಬನಹಟ್ಟಿ : ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿ ವರ್ಷ ಸೆಪ್ಟೆಂಬರ್ ೧೪ ಹಿಂದಿ ದಿನಾಚರಣೆ ವಿರೋಧಿಸಿ ಹಾಗೂ ಭಾರತದ ಭಾಷಾನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ರಬಕವಿ ಬನಹಟ್ಟಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ಮೂಲಕ ತೇರಳಿ ಉಪತಹಶಿಲ್ದಾ ಎಸ್ಎಲ್ ಕಾಗಿನವರ ಇವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಅತಿ ದೊಡ್ಡ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ ಇಪ್ಪತ್ತೊಂದು ವರ್ಷಗಳಿಂದ ನಾಡು ನುಡಿ ಗಡಿ ಜಲ ರಕ್ಷಣೆಯ ಕುರಿತು ಚಳವಳಿಗಳನ್ನು ಸಂಘಟಿಸುತ್ತ ಬಂದಿದೆ.ಕರ್ನಾಟಕದಲ್ಲಿ ಕ್ರಾಂತಿಯೋಗಿ ಬಸವಣ್ಣನವರ ನಾಡು.ಶಾಂತಿ ಸಹಿಷ್ಣುತೆ ಸಹಬಾಳ್ವೆ ನಮಾನತೆಯ ಸಂದೇಶಗಳನ್ನು ಸದಾ ದೇಶಕ್ಕೆ ನೀಡುತ್ತ ಬಂದಿರುವ ಪ್ರಗತಿಪರ ರಾಜ್ಯ.ಒಕ್ಕೂಟ ಸರ್ಕಾರವು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ದೇಶದ ಇತರ ಭಾಷೆಗಳಿಗೆ ಭಾಷಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಭಾರತ ಬಹುಭಾಷೆ ಸಂಸ್ಕೃತಿ ಧರ್ಮಗಳ ನಾಡು ಈ ಬಹುತ್ವ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ ಹಾಗೂ ಈ ಎಲ್ಲ ವ್ಯವಸ್ಥೆಯ ಮೂಲ ಮಂತ್ರವನ್ನೇ ನಮ್ಮ ಸಂವಿಧಾನವು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹಿಂದಿ ಭಾಷೆಯೊಂದಕ್ಕೆ ಮಾತ್ರ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಈ ಹಿಂದಿಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದು ತಕ್ಷಣ ನಿರ್ದೇನದಲ್ಲಿ ನೀಡಬೇಕಾದ ವಿಷಯ ಕಳೆದ ಇಪ್ಪತ್ತು ಒಂದು ವರ್ಷಗಳಿಂದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯು ಅಸಮಾನತೆಯ ಭಾಷಾನೀತಿಯ ವಿರುದ್ಧ ಹೋರಾಡುತ್ತಲೇ ಬಂದಿದೆ.ಭಾರತಕ್ಕೆ ಯಾವುದೇ ಒಂದು ರಾಷ್ಟ್ರ ಭಾಷೆ ಇರುವುದಿಲ್ಲ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳು ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗುತ್ತದೆ ಎಂದು ರಬಕವಿ ಬನಹಟ್ಟಿ ತಾಲ್ಲೂಕು ಕಾನೂನು ಘಟಕದ ಅಧ್ಯಕ್ಷರಾದ ಅರ್ಜುನ ಜಿಡ್ಡಿಮನಿ ಮಾತನಾಡಿದರು.
ಅಧಿಕೃತ ಭಾಷಾ ಕಾಯ್ದೆಯ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಸಂವಿಧಾನ ಜಾರಿಯಾದನಿಂದಲೂ ನಡೆದುಕೊಂಡು ಬಂದಿವೆ.ತಮ್ಮ ಸರ್ಕಾರದ ಅವಧಿಯಲ್ಲೂ ಇದು ಮುಂದುವರಿದಿದೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದಿ ದಿವಸ ಹಿಂದಿ ಸಪ್ತಾಹ ಹಿಂದಿ ಪಕ್ವಾಡ ಹೆಸರಿನಲ್ಲಿ ಭಾರತದ ತೆರಿಗೆದಾರರ ಹಣದಿಂದ ಹಿಂದಿಯೇತರ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ .ಸಂವಿಧಾನದ ಎಂಟನೇ ಪರಿಚಯ ದಲ್ಲಿರುವ ಎಲ್ಲ ಇಪ್ಪತ್ತೆರಡು ಭಾಷೆಗಳಿಗೂ ಸಮಾನ ಸ್ಥಾನಮಾನ ಇರಬೇಕು ಆದರೆ ಕೇಂದ್ರ ಸರಕಾರ ನೀತಿ ಇಡೀ ದೇಶದ ತುಂಬೆಲ್ಲ ಒಂದೇ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ ಈ ನೀತಿಯಿಂದಾಗಿ ಈ ದೇಶದ ಭಾಷಾ ವೈವಿಧ್ಯಕ್ಕೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ.ದೇಶದ ಎಲ್ಲ ಭಾಷೆಗಳೂ ಜೀವಂತವಾಗಿರಬೇಕು ಎಲ್ಲ ಭಾಷೆಗಳೂ ಬೆಳೆಯಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಹಿಂದಿಯ ಸಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಅಸ್ಸಾಮಿ,ಪಂಜಾಬಿ, ಭಾಷೆಗಳ ಹಾಗೆ ಒಂದು ಭಾಷೆಯಾಗಿದೆ.ಜಗತ್ತಿನ ನಾನಾ ದೇಶಗಳಲ್ಲಿ ಒಂದು ಭಾಷೆಯನ್ನು ಬೆಳೆಸಲು ಹೊರಟು ಉಳಿದ ಭಾಷೆಗಳನ್ನು ಕಡೆಗಣಿಸಿದ ಪರಿಣಾಮವಾಗಿ ಜನರು ಬಂಡೆದ್ದು ಹೋರಾಟ ನಡೆಸಿದ ಇತಿಹಾಸವನ್ನು ತಾವು ಗಮನಿಸಬೇಕು ಪಾಕಿಸ್ತಾನ ವಿಭಜನೆಗೊಂಡು ಬಾಂಗ್ಲಾದೇಶ ಸ್ಥಾಪನೆಯಾಗಲು ಕೂಡ ಬಂಗಾಳಿಗಳ ಮೇಲೆ ಉರ್ದು ಭಾಷೆಯನ್ನು ಹೇರಲು ಪ್ರಯತ್ನಿಸದೆ ಮೂಲ ಕಾರಣವೆಂದು ಇತಿಹಾಸ ಹೇಳುತ್ತಿದೆ.ಕೇಂದ್ರ ಸರ್ಕಾರದ ಹಿಂದಿ ಪರವಾದ ನೀತಿಗಳಿಂದಾಗಿ ಹಿಂದಿ ಭಾಷಿಕರು ಇತರ ಭಾಷಿಕರಿಗಿಂತ ಶಿಕ್ಷಣ ಉದ್ಯೋಗದಿಂದ ಹಿಡಿದು ಎಲ್ಲ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ಅವಕಾಶವನ್ನು ಪಡೆಯುತ್ತಿದ್ದಾರೆ ಹಿಂದಿ ಭಾಷಿಕರು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಿದರೆ ಅವರಿಗೆ ಕೇಂದ್ರ ಸರ್ಕಾರ ಎಲ್ಲ ಸೇರುವರು ಹಿಂದಿ ಭಾಷೆಯಲ್ಲಿ ಸಿಗುತ್ತವೆ ಆದರೆ ಒಬ್ಬ ಕನ್ನಡಿಗ ಒಬ್ಬ ಮಲೆಯಾಳಿ ಅಥವಾ ಇನ್ಯಾವುದೇ ಭಾಷೆಗಳ ಜನರಿಗೆ ಬೇರೆ ರಾಜರಲ್ಲಿ ತಮ್ಮ ಭಾಷೆಗಳನ್ನು ಸೇವೆ ಲಭಿಸುವುದಿಲ್ಲ ಎಂತಹ ದುರ್ದೈವದ ಸಂಗತಿ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಮಾಳು ದುರ್ಗನ್ನವರ ತಮ್ಮ ಆಕ್ರೋಶವನ್ನು ಹೊರಹಾಕಿದರು.ಈ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಎತ್ತಿ ಹಿಡಿಯಲು ತಮ್ಮ ಚುಕ್ಕಾಣಿ ಯಲ್ಲಿನ ಘನ ಸರ್ಕಾರ ಇನ್ನು ಮುಂದಾದರೂ ಹಿಂದೆ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಗಳಂಥ, ಅರ್ಥಹೀನ ಅಸಮಾನತೆಯನ್ನು ಹೇರುವ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಸರದಲ್ಲಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಮಾಡಬೇಕು.ಹಿಂದಿ ಮತ್ತು ಇಂಗ್ಲಿಷಿಗೆ ನೀಡಲಾಗಿರುವ ಮಾನ್ಯತೆ ಮತ್ತು ಅವಕಾಶಗಳನ್ನು ಇತರ ಎಲ್ಲ ಭಾಷೆಗಳಿಗೂ ನೀಡಬೇಕು.ಈ ಪ್ರತಿಭಟನಾ ಮನವಿಯನ್ನು ಗಂಭೀರವಾಗಿ ಪರಿಣಿಸಿ ಭಾರತ ಒಕ್ಕೂಟದ ಸಮತೆ ತಾಪದಲ್ಲಿ ಪುನರ ರೂಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಬಕವಿ ಬನಹಟ್ಟಿ ತಹಶೀಲ್ದಾರ ಮೂಲಕ ಮನವಿಯನ್ನು ಸಲ್ಲಿಸಿದರು.
ಈ ಹೋರಾಟದಲ್ಲಿ ಜಿಲ್ಲಾ ಸಹ ಸಂಚಾಲಕ ದೇವೇಂದ್ರ ಅಸ್ಕಿ.ಅನುರಾಧಾ ಶಿರಗುಪ್ಪಿ.ಭಾರತಿ ಕೋಪ್ಪದ.ಸಿರಾಜ ಪೆಂಡಾರಿ.ಪಾಂಡುರಂಗ ಧರ್ಮಟ್ಟಿ.ಜಯಶ್ರೀ ಮುತ್ತಲಗೇರಿ.ಸುಮಿತ್ ಬಂಗಿ.ಕಾಡೇಶ ನ್ಯಾಮಗೌಡ.ಸುಲೋಚನಾ ಪಾತ್ರೋಟ.ಪದ್ಮಾ ಗಾಡಿವಡ್ಡರ.ಕರವೇ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

Social Plugin