ಬನಹಟ್ಟಿಯಲ್ಲಿ ಪ್ರತಿಭಾವಂತ ಬಡವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಾಧನೆಗೆ ಬಡವ-ಬಲ್ಲಿದ ಬೇಧವಿಲ್ಲ
ರಬಕವಿ-ಬನಹಟ್ಟಿ,ಸೆ14: ಪ್ರತಿಭಾವಂತ ವಿದ್ಯಾರ್ಥಿಯಾಗುವ ಮೂಲಕ ಸಾಧನೆ ಮಾಡಬೇಕದಲ್ಲಿ ಬಡವ-ಬಲ್ಲಿದವೆಂಬ ಬೇಧವಿಲ್ಲ. ಇತಿಹಾಸದುದಕ್ಕೂ ಸಾಧಕರ ಪಟ್ಟಿ ನೋಡಿದಾಗ ಕಟ್ಟಕಡೆಯ ಕುಟುಂಬದಿಂದ ಜನಿಸಿದ ಮಕ್ಕಳೇ ಮುಂದಿನ ದೇಶ ಕಟ್ಟುವ ನಾಯಕರಾಗಿ ಬೆಳೆದಿರುವ ಉದಾಹರಣೆಗಳಿವೆ. ಗುರಿಯೊಂದಿದ್ದರೆ ಸಾಕು ಎಲ್ಲವೂ ಸಾಧ್ಯವೆಂದು ವಿದ್ಯಾಧರ ಸವದಿ ಹೇಳಿದರು.
ಇಲ್ಲಿನ ಅಶೋಕ ಕಾಲನಿಯ ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ಬಿಡಿಎಸ್‍ಎಸ್ ಸಂಸ್ಥೆಯಿಂದ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪಿಯು ಹಾಗು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರ್ತಿಸಿ ಮುಂದಿನ ವ್ಯಾಸಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯ ಮಾಡಲಾಯಿತು.
ರಾಜು ಅಂಬಲಿ, ಕುಮಾರ ಕದಂ, ದುರ್ಗವ್ವ ಹರಿಜನ, ಸದಾಶಿವ ಪರೀಠ, ಶಂಕರ ಟಿರಕಿ, ಡಿ.ಕೆ. ದೇವನಾಳ, ಬಸವರಾಜ ಜಿಡ್ಡಿಮನಿ, ಭೀಮಪ್ಪ ಭಜಂತ್ರಿ, ಸಿದ್ಧರಾಮ ದೇವರಾಯ, ಸುಮಿತ್ರಾ ಬೋರಗಿ, ಮುತ್ತಪ್ಪ ಹರಿಜನ, ಆಶಾ ಚಿಕ್ಕೂಡ, ವಿಜಯಲಕ್ಷ್ಮೀ ಜತ್ತಿ ಇದ್ದರು.
Social Plugin