ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತವಾಗಿ ಕಳೋತ್ಸವ ಕಾರ್ಯಕ್ರಮ ನಡೆಯಿತು.
ಮುಕ್ತಾಯಗೊಂಡ ಕಾಡಸಿದ್ಧೇಶ್ವರ ಜಾತ್ರೆ
ರಬಕವಿ-ಬನಹಟ್ಟಿ,ಸೆ10: ಸ್ಥಳೀಯ ಕಾಡಸಿದ್ಧೇಶ್ವರರ ಮೂರು ದಿನಗಳ ಜಾತ್ರೆ ಗುರುವಾರ ಸಂಜೆ ಕಳೋತ್ಸವದೊಂದಿಗೆ ಮುಕ್ತಾಯಗೊಂಡಿತು.
ಪ್ರತಿವರ್ಷ ಕಳೋತ್ಸವವು ನಗರದ ಮಂಗಳವಾರ ಪೇಟೆ ಮತ್ತು ಸೋಮವಾರ ಪೇಟೆಯವರೆಗೆ ಸಂಚರಿಸಿ ದೇವಸ್ಥಾನವನ್ನು ತಲುಪುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಕಳೋತ್ಸವವು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸದೆ ಪ್ರತಿμÁ್ಠಪಿಸಿದ ಸ್ಥಳದಲ್ಲಿಯೇ ಮುಕ್ತಾಯಗೊಂಡಿತು. ನೂರಾರು ಜನ ಭಕ್ತರು ದೇವರ ದರ್ಶನ ಪಡೆದುಕೊಂಡರು.
ಕೊರೊನಾದಿಂದ ಈ ಬಾರಿ ಜಾತ್ರೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಜಾತ್ರೆಯ ಮರು ದಿವಸ ಬುಧವಾರ ನಡೆಯಬೇಕಾಗಿದ್ದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ಕೂಡಾ ರದ್ದು ಮಾಡಿದ್ದರಿಂದ ಈ ಭಾಗದ ಸಾವಿರಾರು ಸಂಖ್ಯೆಯ ಕುಸ್ತಿ ಪ್ರಿಯರು ನಿರಾಶೆಗೊಂಡರು.
ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ಶಶಿಕಾಂತ ಹುನ್ನೂರ, ಶ್ರೀಪಾದ ಬಾಣಕಾರ, ಶಿವರುದ್ರಯ್ಯ ಕಾಡದೇವರ, ಅಶೋಕ ಕಾಡದೇವರ, ಮಲ್ಲಿಕಾರ್ಜುನ ಕಾಡದೇವರ, ವಿವೇಕಾನಂದ ಕಾಡದೇವರ ಸೇರಿದಂತೆ ಸ್ಥಳೀಯ ಗೌಡ ಮತ್ತು ರೈತ ಸಮಾಜದ ಪ್ರಮುಖರು ಇದ್ದರು.
ವೃತ್ತ ನಿರೀಕ್ಷಕ ಜಿ.ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಎಎಸ್‍ಐ ಬಾಬಾಗೌಡ ಪಾಟೀಲ ಮತ್ತು ಪೆÇಲೀಸ್ ಸಿಬ್ಬಂದಿ ವರ್ಗದವರು ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು

Social Plugin