ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನಗಳ ಸನ್ನಿದ್ಧಿಯಲ್ಲಿ ಪೂಜೆ ಸಲ್ಲಿಸಿ ಕಾಯಿ ಒಡೆಸುವುದರ ಮೂಲಕ ಜಾತ್ರೆಗೆ ಚಾಲನೆ ನೀಡಿದರು.
ಮಲ್ಲಿಕಾರ್ಜುನ ಜಾತ್ರೆ ತಯಾರಿಗೆ ಚಾಲನೆ
ರಬಕವಿ-ಬನಹಟ್ಟಿ,ಸೆ10: ಪ್ರತಿ ವರ್ಷ ದೀಪಾವಳಿ ಪಾಢ್ಯಮಿ ದಿನದಂದು ಜರುಗುವ ಮಲ್ಲಿಕಾರ್ಜುನ ದೇವರ ರಥೋತ್ಸವ ಜಾತ್ರಾ ಮಹೋತ್ಸವಕ್ಕೆ ಗುರುವಾರ ನಗರದ ಆರಾಧ್ಯ ದೈವ ಕಾಡಸಿದ್ಧೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಜಾತ್ರೆಗೆ ಕಾಯಿ ಒಡೆಸುವುದರ ಮೂಲಕ ಚಾಲನೆ ನೀಡಲಾಯಿತು.
ಊರಿನ ಪ್ರಮುಖ ಗಣ್ಯರ ನೇತೃತ್ವದಲ್ಲಿ ದೇವಸ್ಥಾನಗಳಲ್ಲಿ ಕಾಯಿ ಒಡೆಸುವ ಮೂಲಕ ದೀಪಾವಳಿಯಂದು ಕೋವಿಡ್ ಹಿನ್ನಲೆಯಲ್ಲಿ ಆಗಿನ ಪರಸ್ಥಿತಿಗೆ ಅನುಗುಣವಾಗಿ ಜಾತ್ರೆ ನಡೆಸಲು ತೀರ್ಮಾಣಿಸಲಾಯಿತು. 
ಇದೇ ಸಂದರ್ಭದಲ್ಲಿ ಮಹಾಂತಯ್ಯ ಹಿರೇಮಠ, ರಾಚಯ್ಯ ಮಠಪತಿ, ಚನಬಸಯ್ಯ ಮಠಪತಿ, ಸುರೇಶ ಗಣೇಶನವರ, ಮಲ್ಲಿಕಾರ್ಜುನ ತುಂಗಳ, ಮಹಾಶಾಂತ ಶೆಟ್ಟಿ, ಮಲ್ಲಿಕಾರ್ಜುನ ಬಾವಲತ್ತಿ, ಪ್ರಶಾಂತ ಕೊಳಕಿ, ಚನ್ನಪ್ಪ ಗುಣಕಿ, ಸಂಜಯ ಕಕಮರಿ, ಶಂಕರ ಜಾಲಿಗಿಡದ, ಕಿರಣ ಆಳಗಿ, ಮಲ್ಲಪ್ಪ ಜನವಾಡ, ಶಿವುಕುಮಾರ ಬಾಗೇವಾಡಿ, ಶಿವಲಿಂಗಪ್ಪ ಶಿರಹಟ್ಟಿ, ಸಂತೋಷ ನಾವಿ, ಶಿವು ಗುಂಡಿ, ರವಿ ಬಾಗೇವಾಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.