ಮೋದಿಯವರ 70ನೇ ಜನ್ಮದಿನಾಚರಣೆ ನಿಮಿತ್ತ ಸೇವಾ ಸಪ್ತಾಹದ ಅಂಗವಾಗಿ ರಬಕವಿಯ ಶ್ರೀ ಕಾಳಮ್ಮ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹ್ಮಮಿಕೊಳ್ಳಲಾಗಿತ್ತು. 

 ಪರಿಸರ ಸ್ವಚ್ಛತೆ ರಾಷ್ಟ್ರದ ಸೇವೆ ಮಾಡಿದಂತೆ
* ಸೇವಾ ಸಪ್ತಾಹದ ಅಂಗವಾಗಿ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ
ರಬಕವಿ-ಬನಹಟ್ಟಿ,ಸೆ18: ಮನೆಯೊಂದಿಗೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಅದು ರಾಷ್ಟ್ರದ ಸೇವೆ ಮಾಡಿದಂತೆ ಎಂದು ಜಿಲ್ಲಾ ಓಬಿಸಿ ಕಾರ್ಯದರ್ಶಿ ಶಿವಾನಂದ ಗಾಯಕವಾಡ ಹೇಳಿದರು. 
ಅವರು ಪ್ರಧಾನಿ ಮೋದಿಯವರ 70ನೇ ಜನ್ಮದಿನಾಚರಣೆ ನಿಮಿತ್ತ ಸೇವಾ ಸಪ್ತಾಹದ ಅಂಗವಾಗಿ ರಬಕವಿಯ ಶ್ರೀ ಕಾಳಮ್ಮ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೋದಿಯವರ ಜನ್ಮ ದಿನಾರಣೆಯನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕ್ಷೇತ್ರಾದ್ಯಂತ ಒಂದು ವಾರಗಳ ಕಾಲ ಸೇವಾ ಸಪ್ತಾಹ ಕಾರ್ಯಕ್ರಮದಡಿ ಓಬಿಸಿ ಮೋರ್ಚಾ ವತಿಯಿಂದ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಕುಮಾರ ಕದಂ, ಓಬಿಸಿ ನಗರ ಘಟಕದ ಅಧ್ಯಕ್ಷ ಮಹಾದೇವ ಆಲಕನೂರ, ರಮೇಶ ಮಂಡಿ, ಪ್ರವೀಣ ಕೋಲಾರ, ಮಹಾದೇವ ಜಾಧವ, ಮಹಾದೇವ ಬಿಸನಾಳ, ಜಡೇಶ ಘಂಟಿ ಸೇರಿದಂತೆ ಅನೇಕರು ಇದ್ದರು.