ಬನಹಟ್ಟಿಯಲ್ಲಿ ನಡೆದ ನೇಕಾರರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನೇಕಾರ ಮುಖಂಡರು.

ವಿವಿಧ ಬೇಡಿಕೆಗೆ ಒತ್ತಾಯಿಸಿ ದಿ.21 ರಂದು ಬೃಹತ್ ಪ್ರತಿಭಟನಾ ರ್ಯಾಲಿ
ರಬಕವಿ-ಬನಹಟ್ಟಿ,ಸೆ18: ಕೈಮಗ್ಗ ನೇಕಾರರು ತೀವ್ರ ಸಂಕಷ್ಟದಲ್ಲಿದ್ದು, ಅನೇಕ ಬೇಡಿಕೆಗಳಿಗೆ ಸ್ಪಂದಿಸುವಂತೆ ಇಂದು ನಗರದ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ, ದಿ.21 ಸೋಮವಾರದಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.
ನೇಕಾರರ ಪ್ರಮುಖವಾದ ವೃತ್ತಪರ ನೇಕಾರರೆಂದು ಪರಿಗಣಿಸುವದು, ಮನೆಗಳ ಅಕ್ರಮ-ಸಕ್ರಮ ಯೋಜನೆಗೆ ಸ್ಪಂದನೆ, 108 ಕೋಟಿ ರೂ. ಕೆಎಚ್‍ಡಿಸಿ ಸಾಲವನ್ನು ಸರ್ಕಾರವೇ ಭರಿಸುವ ಮೂಲಕ ಆವರ್ತ ನಿಧಿ ಸ್ಥಾಪನೆ ಮಾಡುವದರ ಜೊತೆಗೆ ನೇಕಾರರ ಹಿತ ಕಾಪಾಡುವ ಮಹತ್ವದ ಯೋಜನೆ ಜಾರಿಗೊಳಿಸುವದು ಸೇರಿದಂತೆ ಅನೇಕ ಬೇಡಿಕೆಗಳಿಗೆ ಸೋಮವಾರ ಬನಹಟ್ಟಿಯ ಗಾಂಧಿ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವದೆಂದು ಟಿರಕಿ ತಿಳಿಸಿದರು.
ಸಭೆಯಲ್ಲಿ ಶ್ರೀಶೈಲ ಮುಗಳೊಳ್ಳಿ, ಲಕ್ಕಪ್ಪ ಪವಾರ, ಸದಾಶಿವ ಗೊಂದಕರ, ಲಕ್ಕಪ್ಪ ಪವಾರ, ವಿರೇಶ ಶೀಲಂತ, ಆನಂದ ಜೀರಗಾಳ, ವಿಶ್ವನಾಥ ಶಿರೋಳ, ಸಂತೋಷ ಮಾಚಕನೂರ ಸೇರಿದಂತೆ ಅನೇಕರಿದ್ದರು.