ಕಾಡಸಿದ್ಧೇಶ್ವರ ರಥೋತ್ಸವವಿರುವದಿಲ್ಲ
*ಪಟಾಕಿ ಸಂಪೂರ್ಣ ನಿಷಿದ್ಧ
ರಬಕವಿ-ಬನಹಟ್ಟಿ,ಸೆ7: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ಮಂಗಳವಾರ ಜರುಗಬೇಕಿದ್ದ ಪಟಾಕಿ ಜಾತ್ರೆಯೆಂದೇ ಕರೆಯಲಾಗುತ್ತಿರುವ ಬನಹಟ್ಟಿಯ ಆರಾಧ್ಯದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಹಾಗು ರಥೋತ್ಸವವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ ಎಂದು ಕಾಡಸಿದ್ಧೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀಶೈಲ ದಭಾಡಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಸುತ್ತೋಲೆ ಅನುಸಾರ ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಪ್ರಸಕ್ತ ವರ್ಷ ಜಾತ್ರೆಯ ಎಲ್ಲ ವಿಶೇಷ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಸಂಜೆ 6 ಗಂಟೆ ಸುಮಾರು ಹಿರಿಯರ ಸಮ್ಮುಖದಲ್ಲಿ ಪೂಜೆಯೊಂದಿಗೆ ಮಂಗಳಾರುತಿಯೊಂದಿಗೆ ಪರಂಪರೆಯನುಸಾರ ರಥೋತ್ಸವ ಪೂಜೆ ಮಾತ್ರ ಜರುಗಲಿದೆ ಎಂದರು.
ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಮಾತನಾಡಿ, ಯಾವದೇ ಕಾರಣಕ್ಕೂ ಭಕ್ತಾಧಿಗಳು ದೇವಸ್ಥಾನ ಹಾಗು ರಥೋತ್ಸವ ಸುತ್ತಮುತ್ತ ಗುಂಪು ಕಟ್ಟಿ ಸಂಚರಿಸುವಂತಿಲ್ಲ. ಕೊರೊನಾ ನಿಯಮಗಳ ಪಾಲನೆ ಅತಿ ಅವಶ್ಯವಾಗಿದೆ. ಸರ್ಕಾರ ನಿಯಮಗಳನ್ನು ಮುರಿದು ಯಾರೇ ಸಂಚರಿಸಿದರೂ ಅಂಥವರ ಮೇಲೆ ಕ್ರಮ ಜರುಗಿಸಲಾಗುವದೆಂದು ಸ್ಪಷ್ಟಪಡಿಸಿದ್ದಾರೆ.