ರಬಕವಿ ಬನಹಟ್ಟಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಚರಂಡಿ ಕಾಮಗಾರಿ ನಡೆದ ಸ್ಥಳದಲ್ಲಿ ಅಪಾರ ಪ್ರಮಾಣ ನೀರು ನಿಂತಿರುವುದು.
ರಬಕವಿ ಬನಹಟ್ಟಿ: ಭಾರಿ ಮಳೆಗೆ ರಸ್ತೆ, ಚರಂಡಿ ಸಂಪೂರ್ಣ ಕ್ಲೀನ್
ರಬಕವಿ-ಬನಹಟ್ಟಿ,ಸೆ7: ಒಂದು ವಾರಗಳ ಕಾಲ ಪ್ರಖರ ಬಿಸಿಲಿನಿಂದ ರಬಕವಿ ಬನಹಟ್ಟಿ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಬಹಳಷ್ಟು ಬಳಲಿದ್ದರು. ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಸ್ವಲ್ಪ ಪ್ರಮಾಣ ತೆಂಪೆರೆದ ಪರಿಣಾಮವಾಗಿ ಜನರು ನಿಟ್ಟುಸಿರು ಬಿಟ್ಟಂತಾಗಿದೆ.
ಭಾನುವಾರ ಮಧ್ಯರಾತ್ರಿ ಒಂದು ಗಂಟೆಗಳಿಗಿಂತ ಹೆಚ್ಚು ಕಾಲ ಸುರಿದ ರಭಸದ ಮಳೆಯಿಂದಾಗಿ ನಗರದ ರಸ್ತೆಗಳು ಮತ್ತು ಚರಂಡಿಗಳು ಸಂಪೂರ್ಣವಾಗಿ ಸ್ವಚ್ಛಗೊಂಡಿವೆ.
ನಗರದ ತೆಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು. ಬನಹಟ್ಟಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅದೇ ರೀತಿಯಾಗಿ ರಸ್ತೆ ಬದಿಗಿನ ಚರಂಡಿ ನಿರ್ಮಾಣ ಕಾರ್ಯ ಕೂಡಾ ನಡೆಯುತ್ತಿದೆ. ಅಪಾರ ಪ್ರಮಾಣ ಮಳೆಯ ನೀರು ಚರಂಡಿಯಲ್ಲಿ ನಿಂತಿದ್ದರಿಂದ ಕಾಮಗಾರಿಗೆ ತೊಂದರೆಯಾಗಿದೆ.

Social Plugin