ಬನಹಟ್ಟಿಯ ಹಂಸವೇಣಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಆಸಂಗಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ವರ್ಗದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ನಿಮಿತ್ಯ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಿದರು.
ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಯಿಂದ ಶಿಕ್ಷಕರಿಗೆ ಸನ್ಮಾನ
ರಬಕವಿ-ಬನಹಟ್ಟಿ,ಸೆ7 : ಸಮೀಪದ ಆಸಂಗಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ವರ್ಗದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ನಿಮಿತ್ಯ ಹಂಸವೇಣಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಿದರು. 
ಈ ಸಂದರ್ಭದಲ್ಲಿ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಪಶುಪಾಲ ರಂಗನಾಥ್ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹಂಸವೇಣಿ ಶಾಲೆಯ ಅಧ್ಯಕ್ಷರು ಹಾಗೂ ಉಪನ್ಯಾಸಕರು ಆದ ಸಂಗಮೇಶ ಗುಟ್ಲಿ, ಬ್ಯಾಂಕಿನ ಸಿಬ್ಬಂದಿಗಳಾದ ಬಸಪ್ಪ ಮೆಣಸಿನಕಾಯಿ, ರಾಮಚಂದ್ರ ಚಿಕ್ಕುಡ್, ಪ್ರಿಯಾಂಕಾ ಕಾಂಬಳೆ, ಶಿವಾನಂದ ಲುಕ್, ನರಸಿಂಗ್ ಸತರೇಕರ್, ಗಿರಿಮಲ್ಲ ಬಡೇಮಿ, ಶಾಲೆಯ ಮುಖ್ಯ ಗುರುಮತೆ ಉಷಾ ಗುಟ್ಲಿ, ಅಶ್ವಿನಿ ಸಿದ್ದವಗೊಳ, ಗೀತಾ ಬುರ್ಲಿ ಸೇರಿದಂತೆ ಅನೇಕರು ಇದ್ದರು.