ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಲಕ್ಷಬಿಲ್ವಾರ್ಚನೆ ಕಾರ್ಯಕ್ರದಲ್ಲಿ ಭಾಗವಹಿಸಿದ ಸದ್ಭಕ್ತರು.

ಕೊರೊನಾ ಮುಕ್ತಿಗಾಗಿ ಲಕ್ಷಬಿಲ್ವಾರ್ಚನೆ ಕಾರ್ಯಕ್ರಮ

ತೇರದಾಳ : ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಕೊರೊನಾ ಮುಕ್ತಿಗಾಗಿ ಲಕ್ಷಬಿಲ್ವಾರ್ಚನೆ ಕಾರ್ಯಕ್ರಮಕ್ಕೆ ಇಂದು ದೇವಸ್ಥಾನದಲ್ಲಿ ಅರ್ಚಕರಿಂದ ಚಾಲನೆ ದೊರೆಯಿತು.

   ದೇಶದಾದ್ಯಂತ ಕೊರೊನಾ ತನ್ನ ಕಬಂದ ಬಾಹುವನ್ನು ಚಾಚಿ ಯಾರನ್ನು ಬಿಡದೆ ವಕ್ಕರಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಯಾವುದೇ ಜಾತ್ರೆ ಹಬ್ಬ ಹರಿದಿನಗಳನ್ನು ನಿಷೇಧಿಸಿ ಸರಕಾರ ಲಾಕ್‍ಡೌನನ್ನು ಜಾರಿಗೆ ತಂದಿತು. ರಾಜ್ಯದಲ್ಲಿ ಹಲವಾರು ಜನರು ಕೊರೊನಾ ವೈರಾಣುವಿಗೆ ಬಲಿಯಾಗಿದ್ದಾರೆ. ಪಟ್ಟಣದಲ್ಲಿಯೂ ಸಹ ಹಲವಾರು ಜನರು ಸೋಂಕಿಗೆ ಒಳಗಾಗಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಬಂದರೆ ಇನ್ನೂ ಕೆಲವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ಇದು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಅದಕ್ಕಾಗಿ ಕೊರೊನಾ ಮುಕ್ತಿಗಾಗಿ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಅಧಿಕ ಮಾಸದಲ್ಲಿ ಒಂದು ತಿಂಗಳ ಪರ್ಯಂತರ ದೇವಸ್ಥಾನದ ಅರ್ಚಕರು ಲಕ್ಷಬಿಲ್ವಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.        

   ಇಂದಿನ ಲಕ್ಷಬಿಲ್ವಾರ್ಚನೆ ಚಾಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಅರ್ಚಕರು ಮಗಯ್ಯ ಹಿತ್ತಲಮನಿ, ಆನಂದ ಹಿತ್ತಲಮನಿ, ರಾಜು ಹಿತ್ತಲಮನಿ, ಗುಹೇಶ್ವರ ಹಿತ್ತಲಮನಿ, ಪ್ರಕಾಶ ಕಾಡದೇವರ, ಸಂಜು ಹಿತ್ತಲಮನಿ ಪರಯ್ಯ ಹಿತ್ತಲಮನಿ, ಸುರೇಶ ಹಿತ್ತಲಮನಿ, ಅಲ್ಲಯ್ಯ ಹಿತ್ತಲಮನಿ, ಶಂಕ್ರಯ್ಯ ಕಾಡದೇವರ ಅರ್ಚಕರು ಇದ್ದರು. ಅಧಿಕ ಮಾಸದಲ್ಲಿ ಒಂದು ತಿಂಗಳ ಕಾಲ ದಿನಾಲು ಬೆಳಿಗ್ಗೆ 4ಗಂಟೆಯಿಂದ 6ಗಂಟೆಯವರೆಗೆ ಈ ಲಕ್ಷಬಿಲ್ವಾರ್ಚನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಮತ್ತು ಅಷ್ಟ ನಾಮಾವಳಿ ಹಾಗೂ ರುದ್ರಾಭಿಷೇಕ ಕೂಡಾ ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಅಧಿಕ ಮಾಸದಲ್ಲಿ ಭಕ್ತರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ವರೂಪ ಸಂರ್ಶನ ಯೂಟ್ಯೂಬ್ ಚಾನಲ್‍ದಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀಅಲ್ಲಮಪ್ರಭು ದೇವಸ್ಥಾನದ ಅರ್ಚಕರಾದ ಆನಂದ ಹಿತ್ತಲಮನಿ ; ಮೋ. 9739572510 ಹಾಗೂ ರಾಜು ಹಿತ್ತಲಮನಿ ; ಮೋ. 9739572705ದಲ್ಲಿ ಸಂರ್ಕಿಸಬಹುದು.