ರಬಕವಿ ಬನಹಟ್ಟಿ ನಗರಸಭೆಯ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸಮಾಜಕ್ಕಾಗಿ ಪೌರ ಕಾರ್ಮಿಕರ ಸೇವೆ ಶ್ರೇಷ್ಠವಾದುದು
ರಬಕವಿ-ಬನಹಟ್ಟಿ,ಸೆ23: ಪೌರ ಕಾರ್ಮಿಕರು ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸೇವೆ ಶ್ರೇಷ್ಠವಾದುದು. ಅವರ ಕಾರ್ಯ ನಿಜಕ್ಕೂ ಸ್ಮರಣೀಯವಾದುದು.ಆದ್ದರಿಂದ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ಅವರು ಬುಧವಾರ ಸ್ಥಳೀಯ ನಗರಸಭೆಯ ಸಭಾ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನಾಚರಣೆ ನಿಮಿತ್ತವಾಗಿ ನಗರಸಭೆಯಲ್ಲಿ 15 ಜನ ಖಾಯಂ ಪೌರ ಕಾರ್ಮಿಕರಿಗೆ ಸರ್ಕಾರದಿಂದ ತಲಾ ರೂ.3000 ಗೌರವ ಧನವನ್ನು ನೀಡಲಾಗುವುದು. ಅದು ಅವರ ಖಾತೆಗೆ ಜಮೆಯಾಗುವುದು. ಕೋವಿಡ್-19 ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಶ್ರೇಷ್ಠವಾದುದು. ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶ್ರೀನಿವಾಸ ಜಾಧವ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 102 ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಸಮಾರಂಭದ ವೇದಿಕೆಯ ಮೇಲೆ ಮ್ಯಾನೇಜರ್ ಬಿ.ಎಂ.ಡಾಂಗೆ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಐ.ಶೇಖ, ನಗರಸಭೆಯ ಅಧಿಕಾರಿಗಳಾದ ಬಸವರಾಜ ಶರಣಪ್ಪನವರ, ವಿ.ಐ. ಬೀಳಗಿ ಇದ್ದರು.
ಕಾರ್ಯಕ್ರಮದಲ್ಲಿ ಅಭಿನಂದನ ಸೋನಾರ, ರಮೇಶ ಮಳ್ಳಿ, ಅಶೋಕ ಗುಡಿಮನಿ,  ಸಂಗೀತಾ ಕೋಳಿ, ಇರ್ಫಾನ್ ಝಾರೆ, ಬಿ.ಕೆ.ಮಠದ, ಎಂ.ಆರ್.ಚೌಡಕಿ, ಸತೀಶ ಅಕ್ಕಿವಾಟ, ಉಮೇಶ ಹೊಸಮನಿ, ರಾಮು ಬಸವ್ವಗೋಳ, ರಾಜು ಗಸ್ತಿ, ಕಿರಣ ಹಕ್ಕಲದಡ್ಡಿ ಸೇರಿದಂತೆ ಅನೇಕರು ಇದ್ದರು.