ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ ಶ್ರೀ ಜೇಡರ್ ದಾಸಿಮಯ್ಯ (ಪುತ್ತಳಿ) ಸರ್ಕಲ್ ಸ್ಥಾಪಿಸಲು ಅನುಮತಿ ನೀಡಲು ಆಗ್ರಹಿಸಿ ಹಟಗಾರ ಸಮಾಜ ಅಭಿವೃದ್ಧಿ ಸಂಘದಿಂದ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಲಾಯಿತು.
ಬಸ್ ನಿಲ್ದಾಣದ ಹತ್ತಿರದ ವೃತ್ತಕ್ಕೆ ಜೇಡರ ದಾಸಿಮಯ್ಯ ಹೆಸರಿಡಲು ಮನವಿ
ರಬಕವಿ-ಬನಹಟ್ಟಿ,ಸೆ22: ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ ಶ್ರೀ ಜೇಡರ್ ದಾಸಿಮಯ್ಯ (ಪುತ್ತಳಿ) ಸರ್ಕಲ್ ಸ್ಥಾಪಿಸಲು ಅನುಮತಿ ನೀಡಲು ಆಗ್ರಹಿಸಿ ಹಟಗಾರ ಸಮಾಜ ಅಭಿವೃದ್ಧಿ ಸಂಘದಿಂದ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಸೋಮನಾಥ ಗೊಂಬಿ, ಬನಹಟ್ಟಿ ನಗರದಲ್ಲಿ ಶೇ. 70 ರಷ್ಟು ನೇಕಾರಿಕೆ ಕುಟುಂಬಗಳು ವಾಸವಾಗಿದ್ದು ಅದ್ಯ ವಚನಕಾರ ನೇಕಾರ ಸಂತ ನೇಕಾರರ ಕುಲಗುರು ಶ್ರೀ ಜೇಡರ ದಾಸಿಮಯ್ಯ ಸರ್ಕಲ್ ಬನಹಟಿ ನಗರದ ಬಸ್ ನಿಲ್ದಾಣದ ಹತ್ತಿರ ಜಮಖಂಡಿ-ಜಗದಾಳ-ರಬಕವಿ ರಸ್ತೆಗಳ ಸೇರುವ ಸ್ಥಳದಲ್ಲಿ ಸ್ಥಾಪಿಸಬೇಕೆಂದು ಎಲ್ಲ ನೇಕಾರ ಬಾಂದವರ ಇಚ್ಛೆಯಾಘಿದೆ. ಆದ್ದರಿಂದ ತಾವ ನಮ್ಮ ಕೋರಿಕೆಯನ್ನು ಪರಿಗಣಿಸಿ ನಮಗೆ ಶ್ರೀ ಜೇಡರ ದಾಸಿಮಯ್ಯ ಸರ್ಕಲ್ ಮಾಡಲು ಅನುಮತಿ ಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜು ಬಾಣಕಾರ, ರಾಜು ಅಂಬಲಿ, ದೇವೆಂದ್ರ ಶೀಲವಂತ, ಶಾಂತಾ ಸೋರಗಾಂವಿ, ರೇಖಾ ಮಂಡಿ, ದೇವೆಂದ್ರ ಶೀಲವಂತ, ರಾಜಶೇಖರ ಬೀಳಗಿ ಸೇರಿದಂತೆ ಅನೇಕರು ಇದ್ದರು.

Social Plugin