ಬನಹಟ್ಟಿ ಸಹಕಾರಿ ನೂಲಿನ ಗಿರಣಿಯಿಂದ ಶಾಸಕ ಸಿದ್ದು ಸವದಿಯವರನ್ನು ಕೆಎಚ್‍ಡಿಸಿ ನಿಗಮದ ಅಧ್ಯಕ್ಷರಾಗಿದ್ದಕ್ಕೆ ಸನ್ಮಾನಿಸಲಾಯಿತು.
ರಬಕವಿ-ಬನಹಟ್ಟಿ
ಕಳೆದ 2008 ರ ಅವಧಿಯಲ್ಲಿ ಶಾಸಕನಾಗಿದ್ದ ಸಂದರ್ಭ 13.5 ಕೋಟಿ ರೂ.ಗಳಷ್ಟು ಸರ್ಕಾರದಿಂದ ಸಾಲವನ್ನು ಬನಹಟ್ಟಿ ಸಹಕಾರಿ ನೂಲಿನ ಗಿರಣಿಗೆ ನೀಡುವ ಮೂಲಕ ಗಿರಣಿಯ ಪುನಶ್ಚೇತನಕ್ಕೆ ಶ್ರಮಿಸಿದ್ಧೇನೆ. ನಂತರದ ದಿನಗಳಲ್ಲಿ ಸಂಪೂರ್ಣ ಅಸಲು ಹಾಗು ಬಡ್ಡಿ ಸಹಿತ ಸಹಾಯ ಧನವನ್ನಾಗಿ ಪರಿವರ್ತಿಸಲಾಗಿದೆ. ಆದರೂ ಲಾಭದಾಯಕವಾಗಿ ಗಿರಣಿ ನಡೆಸುವಲ್ಲಿ ವೈಫಲ್ಯ ಕಾಣುತ್ತಿದೆ. ಇದರ ಪುನಶ್ಚೇತನಕ್ಕೆ ಮತ್ತಷ್ಟು ಶ್ರಮಿಸುವೆ ಎಂದು ಶಾಸಕ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ನೂಲಿನ ಗಿರಣಿ ಆಡಳಿತ ಮಂಡಳಿಯಿಂದ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನ ಸ್ವೀಕರಿಸದ್ದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬಳಿ ಮತ್ತೊಮ್ಮೆ ನಿಯೋಗ ಕರೆದುಕೊಂಡು ಹೋಗುವ ಮೂಲಕ ಗಿರಣಿ ಸ್ಥಿತಿ-ಗತಿ ಬಗ್ಗೆ ವಿವರಿಸಲಾಗುವದೆಂದು ಭರವಸೆ ಮೂಡಿಸಿದರು.
ಇದೇ ಸಂದರ್ಭ ನೂಲಿನ ಗಿರಣಿ ಅಧ್ಯಕ್ಷ ವಿಜಯಕುಮಾರ ಜುಂಜಪ್ಪನವರ, ಉಪಾಧ್ಯಕ್ಷ ಬಸವರಾಜ ತೆಗ್ಗಿ, ಬ್ರಿಜ್‍ಮೋಹನ ಡಾಗಾ, ಜಿ.ಎಸ್. ಗೊಂಬಿ, ಕಾರ್ಯನಿರ್ವಾಹಕ ಅಧಿಕಾರಿ ಕೆ. ಪ್ರಭಾಕರ ಹಾಜರಿದ್ದರು.

Social Plugin