ತೇರದಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ದಾನಿಗಳು ಕೊಟ್ಟಿರುವ ಅಲ್ಮಾರಿಯನ್ನು ಜಿಲ್ಲಾ ಸಾರಿಗೆ ನಿಯಂತ್ರಕ ಬಸವರಾಜ ಅಮ್ಮನ್ನವರ ಉದ್ಘಾಟಿಸಿದರು.
ತೇರದಾಳ : ಗುಣಮಟ್ಟದ ಅಲ್ಮಾರಿ ಹಾಗೂ ಧ್ವನಿವರ್ಧಕವನ್ನು ಕೊಟ್ಟು ಸಾರಿಗೆ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುತ್ತಿರುವ ತೇರದಾಳ ಪಟ್ಟಣದ ಜನತೆಯ ಸಹಕಾರ ಮೆಚ್ಚುವಂತದ್ದು. ಹಾಗೂ ಪಟ್ಟಣದಿಂದ 70ಕ್ಕೂ ಅಧಿಕ ಕಾರ್ಮಿಕರನ್ನು ನಮ್ಮ ಸಾರಿಗೆ ಸಂಸ್ಥೆಗೆ ಕೊಟ್ಟಿದ್ದು ಹೆಮ್ಮೆಯ ವಿಷಯವೆಂದು ಜಿಲ್ಲಾ ಸಾರಿಗೆ ಸಂಸ್ಥೆಯ ನಿಯಂತ್ರಕ ಬಸವರಾಜ ಅಮ್ಮನವರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‍ಗಳ ಬಂದು ನಿಲ್ಲುವ ಹಾಗೂ ಹೊರಡುವ ಸಮಯವನ್ನು ಹೇಳುವ ಸಲುವಾಗಿ ಧ್ವನಿವರ್ಧಕ ಹಾಗೂ ಅಲ್ಮಾರಿಯನ್ನು ಕೊಟ್ಟಿರುವ ಪ್ರಭು ಗಸ್ತಿ ಮತ್ತು ವರ್ತಕರ ಸೌಹಾರ್ಧ ಕ್ರೆಡಿಟ್ ಕೋ-ಆಫ್ ಸೊಸೈಟಿಯವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ಉತ್ತಮ ಸೇವೆಯನ್ನು ಒದಗಿಸಲು ತಮ್ಮೆಲ್ಲರ ಸಹಕಾರ ಅವಶ್ಯಕವಾದದು. ಮಹಾಮಾರಿ ಕೊರೊನಾದಿಂದಾಗಿ ನಮ್ಮ ಸಂಸ್ಥೆಗೆ ಆದಾಯ ಕಡಿಮೆಯಾಗಿದೆ. ಸುರಕ್ಷತೆಗಾಗಿ ಮತ್ತು ಆರೋಗ್ಯಕ್ಕಾಗಿ ಎಲ್ಲರೂ ಸರಕಾರಿ ಸಾರಿಗೆ ಬಸ್‍ದಲ್ಲಿ ಸಂಚರಿಸಬೇಕು. ಕೊರೊನಾ ವೈರಾಣುವಿನಿಂದ ರಕ್ಷಣೆಯ ಸಲುವಾಗಿ ಒಂದು ಬಸ್‍ದಲ್ಲಿ 30ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಪ್ರಯಾಣಿಕರು ಯಾರು ಭಯ ಪಡುವ ಅವಶ್ಯಕತೆಯಿಲ್ಲ. ತಮ್ಮೇಲ್ಲರ ಸಹಕಾರದಿಂದ ನಮ್ಮ ಸಂಸ್ಥೆಯು ಪ್ರಗತಿಯತ್ತ ಸಾಗುತ್ತಿದೆ ಎಂದರು. ರೇವಣೇಶ ಹಿರೇಮಠ ಮಾತನಾಡಿ ಈ ಹಿಂದೆ ಬೈಲಹೊಂಗಲ ತೇರದಾಳ ಬಸ್ ಬರುತ್ತಿತ್ತು ಈಗ ಅದು ಸ್ಥಗಿತಗೊಂಡ ಸುಮಾರು 20ವರ್ಷಗಳು ಗತಿಸಿವೆ ಅದನ್ನು ಪುನಃ ಪ್ರಾರಂಭಿಸಬೇಕು. ಮುಧೋಳಕ್ಕೆ ನೇರವಾಗಿ ಹೋಗಲು ಬಸ್‍ನ್ನು ಮತ್ತು ಗೋಕಾಕ ಕಡೆಗೆ ಹೋಗಲು ಬಸ್ ಅನುಕೂಲತೆ ಇಲ್ಲದಿರುವುದರಿಂದ ಆ ಮಾರ್ಗವಾಗಿ ಬಸ್ ವ್ಯವಸ್ಥೆಯನ್ನು ಮಾಡಬೇಕು ಎಂದರು. ಜಮಖಂಡಿ ಘಟಕದ ನಿಯಂತ್ರಣಾಧಿಕಾರಿ ಪಿ.ವ್ಹಿ.ಮೇತ್ರಿ ಹಾಗೂ ಸಂಗಮೇಶ ಮಾಟೋಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಧ್ವನಿವರ್ಧಕ ಹಾಗೂ ಅಲ್ಮಾರಿ ಕುರ್ಚಿಗಳ ದಾನಿಗಳಾದ ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ ಮತ್ತು ವರ್ತಕರ ಸೌಹಾರ್ಧ ಕ್ರೆಡಿಟ್ ಕೋ-ಆಫ್ ಸೊಸೈಟಿಯ ಅಧ್ಯಕ್ಷ ಯು.ಜಿ.ಮುಜಾವರ ಅವರನ್ನು ಸನ್ಮಾನಿಸಿದರು. ತಾಲೂಕಾ ಹೋರಾಟ ಸಮೀತಿಯ ಅಧ್ಯಕ್ಷ ಬುಜಬಲಿ ಕೆಂಗಾಲಿ, ಪ್ರಭು ಬಾಗಿ, ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ, ಯು.ಜಿ.ಮುಜಾವರ ವೇದಿಕೆಯಲ್ಲಿದ್ದರು. ಮಾರುತಿ ಗುರವ ಸ್ವಾಗತಿಸಿ ನಿರೂಪಿಸಿದರು. ಶಿವಾನಂದ ಹಲಗಲಿ ವಂದಿಸಿದರು. ರೇವಣೇಶ ಹಿರೇಮಠ ಸೇರಿದಂತೆ ಪಟ್ಟಣದ ಪ್ರಮುಖರು ಇನ್ನಿತರರು ಇದ್ದರು.
Social Plugin