ಬನಹಟ್ಟಿಯ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಹಾರ್ಡ್ ವರ್ಕ್‍ಗಿಂತ ಸ್ಮಾರ್ಟ್ ವರ್ಕ್ ಹೆಚ್ಚು ಅಮೂಲ್ಯ
ರಬಕವಿ-ಬನಹಟ್ಟಿ
 ಕಲಿಕೆಯನ್ನು ಸುಲಭವನ್ನಾಗಿ ಮಾಡುವಲ್ಲಿ ಸ್ಮಾರ್ಟ್ ವರ್ಕ್ ಕೆಲಸಗಳ ಕೊರತೆಯಿಂದ ವಿದ್ಯಾರ್ಥಿಗಳು ಹಿಂದೆ ಬೀಳುವಲ್ಲಿ ಕಾರಣವಾಗಿದೆ ಎನ್ನುವದಕ್ಕೆ ಸ್ವತಃ ಅನುಭವಿಸಿದ್ದೇನೆಂದು ನೂತನ ಠಾಣಾಧಿಕಾರಿಯಾಗಿ ನೇಮಕಗೊಂಡ ಸುಜಾತಾ ಪಾಟೀಲ ಹೇಳಿದರು.
ನಗರದ ಕಾಡಸಿದ್ದೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಉನ್ನತ ಪರೀಕ್ಷೆಗಳನ್ನು ಎದುರಿಸುವ ಸಂದರ್ಭ ಹಾರ್ಡ್ ವರ್ಕ್‍ಗಿಂತಲೂ ಸ್ಮಾರ್ಟ್ ವರ್ಕ್‍ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈಗಾಗಲೇ ಉನ್ನತ ಶಿಕ್ಷಣ ಡಿಜಿಟಲ್‍ದಿಂದ ಮತ್ತಷ್ಟು ಸ್ಮಾರ್ಟ್ ಆಗಿದೆ ಇದರಿಂದ ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಸಾಧ್ಯವೆಂದರು.
ಇದೇ ಸಂದರ್ಭ ನೋಟರಿಯರ್ ಆಗಿ ನೇಮಕಗೊಂಡ ಹಿರಿಯ ನ್ಯಾಯವಾದಿ ಹರ್ಷವರ್ಧನ ಪಟವರ್ಧನ, ಯುವ ನ್ಯಾಯವಾದಿ ಬಸವರಾಜ ಭೂತಿಯವರನ್ನು ಸನ್ಮಾನಿಸಲಾಯಿತು.
ಶಂಕರ ಜುಂಜಪ್ಪನವರ, ಮಲ್ಲಿಕಾರ್ಜುನ ಕಕಮರಿ, ದುಂಡಪ್ಪ ಮಾಚಕನೂರ, ಸುರೇಶ ಅಬಕಾರ, ಸಿದ್ರಾಮಪ್ಪ ಸವದತ್ತಿ, ಓಂಪ್ರಕಾಶ ಕಾಬರಾ, ಶಿವಪೂಜಿ, ಶಶಿಕಾಂತ ಹುನ್ನೂರ, ಶ್ರೀಶೈಲ ಯಾದವಾಡ, ವಿಜಯ ಜುಂಜಪ್ಪನವರ, ಜಗದೀಶ ಕೋರಿಪೇಠ, ರಾಜು ಫಕೀರಪುರ, ರಾಜು ಬಾಣಕಾರ, ಮಹಾಲಿಂಗ ಬಾಗಲಕೋಟ ಸೇರಿದಂತೆ ಅನೇಕರಿದ್ದರು.