ರೈತ ವಿರೋಧಿ ಭೂ ಸುಧಾರಣೆ ಕಾಯ್ದೆಯನ್ನು ವಿರೋಧಿಸಿ ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನದಿಂದ ಸರಕಾರದ ವಿರುಧ್ಧ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಯಿತು.

ತೇರದಾಳ ರೈತವಿರೋಧಿ ಭೂ ಸುಧಾರಣೆ ಕಾಯ್ದೆಯನ್ನು ವಿರೋಧಿಸಿ ತೇರದಾಳ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸದರು.

ರೈತವಿರೋಧಿ ಭೂ ಸುಧಾರಣೆ ಕಾಯ್ದೆಯನ್ನು ವಿರೋಧಿಸಿ ತೇರದಾಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ರಸ್ತೆ ತಡೆ ನಡೆಸಿದರು. 

ತೇರದಾಳ : ರೈತವಿರೋಧಿ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಹಾಗೂ ಕಾರ್ಮಿಕ ನೀತಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

  ಪ್ರತಿಭಟನಾ ಮೆರವಣಿಗೆಯು ಶ್ರೀಅಲ್ಲಮಪ್ರಭು ದೇವಸ್ಥಾನದಿಂದ ಎತ್ತಿನ ಬಂಡಿಯ ಜೊತೆಗೆ ಚಾಲನೆಗೊಂಡು ಸಿದ್ದೇಶ್ವರ ಗಲ್ಲಿ, ಜವಳಿ ಬಜಾರ, ಕಾಳಿನ ಬಜಾರ, ಗುಮ್ಮಟಗಲ್ಲಿ, ಹಳೆಪೇಠ, ಎಲ್ಲಮ್ಮನ ದೇವಸ್ಥಾನ, ಚಾವಡಿ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಬಂದು ರಸ್ತೆ ತಡೆ ನಡೆಸಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಪ್ರವೀಣ ನಾಡಗೌಡ, ಮೃತ್ಯಂಜಯ ತೆಳಗಿನಮನಿ, ನೇಮಣ್ಣ ಸಾವಂತನವರ, ಬುಜಬಲಿ ಕೆಂಗಾಲಿ,  ಮಾತನಾಡಿ ರೈತರ ಬವಿಷ್ಯವನ್ನು ನಾಶಮಾಡಲು ಹೊರಟಿರುವ ಈ ರೈತ ವಿರೋಧಿ ಕಾಯ್ದೆಯನ್ನು ರಾಜ್ಯದ ಎಲ್ಲಾ ರೈತ ವರ್ಗ ವಿರೋಧಿಸುತ್ತದೆ. ಕೂಡಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತನೇ ದೇಶದ ಬೆನ್ನೇಲಬು ಎಂದು ಸುಳ್ಳು ಆಶ್ವಾಸನೆ ಹೇಳುವುದನ್ನು ಬಿಟ್ಟು ಈ ರೈತ ವಿರೋಧಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದರು.

  ಬಸ್ ನಿಲ್ದಾಣದ ಹತ್ತಿರ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಗೆಪ್ಪ ತಾರದಾಳ, ಅಪ್ಪಾಸಾಬ ಪಡಸಲಗಿ, ಬಾಬು ಕುಲಗೂಡ, ಗಿರಿಮಲ್ಲ ಕೊಕಟನೂರ, ಗಂಗಪ್ಪ ಬಾಗಿ, ಅಶೋಕ ಅಳಗೊಂಡ, ಮಲ್ಲಿನಾಥ ಬೋಳಗೊಂಡ, ಆಧಿನಾಥ ಸಪ್ತಸಾಗರ, ಪಿ.ಎಸ್.ಮಾಸ್ತಿ, ಸಿದ್ದು ದೊಡಮನಿ, ಗೌತಮ ರೋಡಕರ, ಮೈನೋದ್ದೀನ ಮೊಕಾಶಿ, ವಿಠ್ಠಲ ಶಿಂಗೆ, ರಾಜು ನದಾಫ, ಶ್ರೀಶೈಲ ಮಲಾಬದಿ, ರಿಯಾಜ ಹನಗಂಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಇದ್ದರು.