ಬನಹಟ್ಟಿ ಗಾಂಧಿ ವೃತ್ತದಲ್ಲಿ ರೈತ ಸಂಘ ಹಾಗೂ ಇನ್ನೀತರ ಸಂಘಟನೆಗಳು ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ ನಂತರ ತಹಸೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘದ ಕಾರ್ಯದರ್ಶಿ ಗಂಗಾಧರ ಮೇಟಿ, ಕಾಂಗ್ರೆಸ್ ಮುಖಂಡರಾದ ಡಾ. ಪದ್ಮಜೀತ ನಾಡಗೌಡಪಾಟೀಲ ಇದ್ದರು.
ಬನಹಟ್ಟಿ ನಗರದಲ್ಲಿ ಪ್ರತಿಭಟನೆ ಸಂಬರ್ಧದಲ್ಲಿ ಎತ್ತಿನ ಗಾಡಿಯಲ್ಲಿ ಗಾಂಧೀಜಿಯವರ ವೇಷ ಧರಿಸಿ ಪ್ರತಿ ಭಟಿಸಿದರು. ಸರ್ಕಾರ ಬದಲಿಸುವ ತಾಕತ್ತು ರೈತರಿಗಿದೆ
*ರೈತ ಸಂಘಟನೆಗಳಿಂದ ಪ್ರತ್ಯೇಕ ಹೋರಾಟ *ರೈತರಿಗೆ ಕಾಂಗ್ರೆಸ್-ಜೆಡಿಎಸ್ ಸಾಥ್
*ಬಂದ್‍ನಿಂದ ನೀರಸ ಪ್ರತಿಕ್ರಿಯೆ
ರಬಕವಿ-ಬನಹಟ್ಟಿ,ಸೆ28: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ರೈತರಿಗೆ ಅನ್ಯಾಯ ಮಾಡುತಿದ್ದಾರೆ. ರೈತ ಪರವಾಗಿ ಸರ್ಕಾರಗಳು ನಿಲ್ಲದಿದ್ದರೆ ಸರ್ಕಾರಗಳನ್ನೆ ಬದಲಿಸುವ ಶಕ್ತಿ ರೈತ ಸಂಘಕ್ಕಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ ಖಡಕ್ ಎಚ್ಚರಿಕೆ ನೀಡಿದರು.
ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬಂದ್‍ಗೆ ಕರೆ ನೀಡಿದ ಹಿನ್ನಲೆಯಲ್ಲಿ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ತಹಸೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಾಗ ವಿರೋಧಪಕ್ಷದವರನ್ನು ಹಾಗೂ ರೈತರನ್ನು ಲೆಕ್ಕಿಸದೆ ಏಕಪಕ್ಷೀಯವಾಗಿ ಅಂಗೀಕಾರಗೊಳಿಸಿದ್ದನ್ನು ನಾವು ಖಂಡಿಸುತ್ತೇವೆ. ಕಾಯ್ದೆ ಹಿಂಪೆಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಬಂದ್ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ಬಸ್, ಟಂಟಂ, ಹೊಟೇಲ್, ಅಂಗಡಿ ಮಗ್ಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.
ಈ ಮೊದಲು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‍ಗಳ ಮೂಲಕ ರ್ಯಾಲಿ ನಡೆಸಿದ ರೈತರು ಬನಹಟ್ಟಿಯ ಗಾಂಧಿ ವೃತ್ತದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರೆ, ಬಸವಂತರಾವ್ ಕಾಂಬಳೆಯವರ ನೇತೃತ್‍ವದಲ್ಲಿ ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ರಾಂಪುರ ರಬಕವಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಗೀರಥ ಸರ್ಕಲ್‍ನಲ್ಲಿ ಕೆಲ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟೆಗಳು, ಜೆಡಿಎಸ್, ಕಾಂಗ್ರೆಸ್ ಹಾಗೂ ರೈತ ಸಂಘದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
ಬಂದ್ ನೀರಸ ಪ್ರತಿಕ್ರಿಯೆ: ಬಂದ್ ಕರೆ ಘೋಷಿಸಿದ್ದ ರೈತರಿಂದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಸ್ ಸಂಚಾರ, ವ್ಯಾಪಾರ-ವಹಿವಾಟು ಸೇರಿದಂತೆ ಎಲ್ಲ ಕಾರ್ಯಗಳು ಎಂದಿನಂತೆ ಸರಾಗವಾಗಿ ಸಾಗಿದ್ದವು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಪದ್ಮಜೀತ ನಾಡಗೌಡಪಾಟೀಲ, ನೇಕಾರ ಮುಖಂಡ ಸಿದ್ದಲಿಂಗ ಟಿರ್ಕಿ, ಸಿದ್ದಪ್ಪ ಕೊಣ್ಣೂರ, ಬಸವರಾಜ ಕೊಕಟನೂರ, ನಾರಾಯಣ ನಿಕ್ಕಂ, ದೇವೇಂದ್ರ ಅಸ್ಕಿ, ಮಲ್ಲಪ್ಪ ಸಿಂಗಾಡಿ, ಡಿ. ಎಸ್. ಪಟ್ಟಣಶೆಟ್ಟಿ, ಪ್ರಕಾಶ ಸಣಕಲ್, ಹೊನ್ನಪ್ಪ ಬಿರಡಿ, ಡಾ. ಎ. ಆರ್. ಬೆಳಗಲಿ, ಶಂಕರ ಸೊರಗಾಂವಿ, ಇನ್ನೊಂದು ಟೀಮ್‍ನಲ್ಲಿ ಮಾಯಾಪ್ಪ ತುರಾದಿ, ಸಿದ್ದು ಉಳ್ಳಾಗಡ್ಡಿ, ಕಾಡು ಪಾಟೀಲ, ರಾಮಣ್ಣ ಮಲ್ಲೋಡಿ, ಸಿದ್ದಪ್ಪ ಮಲ್ಲೋಡಿ, ಕಲ್ಲಪ್ಪ ಬಳಗಾರ, ಸಿದ್ದಪ್ಪ ಲದ್ದಿ, ಯಲ್ಲಪ್ಪ ಕರಿಗಾರ, ಸೇರಿದಂತೆ ಅನೇಕರಿದ್ದರು.
Social Plugin