ಬನಹಟ್ಟಿಯ ಸೋಮವಾರ ಪೇಟೆಯ ರಬಕವಿ-ಬನಹಟ್ಟಿ ಭಗತಸಿಂಗ್ ಯುವಕ ಸಂಘದವರು ಹಮ್ಮಿಕೊಂಡ ಭಗತಸಿಂಗ್‍ರ 113ನೇ ಜನ್ಮದಿನೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಗಣ್ಯರು 

ಭಗತ್ ಸಿಂಗ್ ಯುವ ಪೀಳಿಗೆಗೆ ಸ್ಪೂರ್ತಿ

ರಬಕವಿ-ಬನಹಟ್ಟಿ,ಸೆ28: ಮಹಾನ ರಾಷ್ಟ್ರಪ್ರೇಮಿ ಕ್ರಾಂತೀವೀರ ಭಗತ ಸಿಂಗ್ ಈ ನಾಡಿನ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಅವರು ಬನಹಟ್ಟಿಯ ಸೋಮವಾರ ಪೇಟೆಯ ರಬಕವಿ-ಬನಹಟ್ಟಿ ಭಗತಸಿಂಗ್ ಯುವಕ ಸಂಘದವರು ಹಮ್ಮಿಕೊಂಡ ಭಗತಸಿಂಗ್‍ರ 113ನೇ ಜನ್ಮದಿನೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಗತ ಸಿಂಗರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಮ್ಮ ನಾಡಿನ ಎಲ್ಲ ಯುವಕರು ಭಗತಸಿಂಗ್‍ರ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನ ಮೈಗೂಡಿಸಿಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದಭದಲ್ಲಿ ಹಿಂದು ಸಂಘಟನೆ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಭಗತಸಿಂಗ್ ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.  ಕೇವಲ ನನ್ನ ಶರೀರವನ್ನು ಕೊಲ್ಲಬಹುದು ಆದರೆ ನನ್ನ ಆಲೋಚನೆಯನ್ನು ಅಲ್ಲ. ಅದು ಎಂದೆಂದಿಗೂ ಚಿರಾಯು ಎಂದು ಭಗತಸಿಂಗ ಹೇಳಿದ್ದರು ಎಂದು ಗಾಯಕವಾಡ ತಿಳಿಸಿದರು. 

ಸಮಾರಂಭದ ದಿವ್ಯ ಸಾನಿದ್ಯವನ್ನು ಬನಹಟ್ಟಿಯ ಹಿರೇಮಠದ ಶರಣ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. 

ಈ ಸಂದರ್ಭದಲ್ಲಿ ಬ್ರಿಜ್‍ಮೋಹನ ಡಾಗಾ, ರಾಜು ಅಂಬಲಿ, ಭಗತ್ ಸಿಂಗ್ ಯುವಕ ಸಂಘದ ಆನಂದ ಜಗದಾಳ, ರಾಜು ಟೆಂಗಿನಕಾಯಿ, ಬಸವರಾಜ ಗಾಯಕವಾಡ, ರವಿ ಸಾರವಾಡ, ಕುಮಾರ ಕದಂ, ಶಿವಾನಂದ ಮನಗೂಳಿ, ಕಾಡು ಕೊಂಬಾಗಿ, ಮಾರುತಿ ಆದರಗಿ, ಈಶ್ವರ ನಾಗರಾಳ, ಸಂತೋಷ ಚುನಮರಿ, ಸಂತೋಷ ಪದಮಗೊಂಡ, ರವಿ ರಾವಳ, ರಾಚು ಶಿರೋಳ, ಮಹಾದೇವ ಚನಾಳ ಸೇರಿದಂತೆ ಅನೇಕರು ಇದ್ದರು.