ಲೋಕಕಲ್ಯಾಣಾರ್ಥವಾಗಿ ಅಧೀಕಮಾಸದಲ್ಲಿ ಶ್ರೀ ಅಲ್ಲಮಪ್ರಭುದೇವರಿಗೆ ಲಕ್ಷಬಿಲ್ವಾರ್ಚಣೆ.....



ತೇರದಾಳ ಮತಕ್ಷೇತ್ರ : ಬಾಗಲಕೋಟ ಜಿಲ್ಲೆಯ ತೇರದಾಳ ಮತಕ್ಷೇತ್ರದ ತೇರದಾಳ ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಅಧೀಕಮಾಸ ಪ್ರಯುಕ್ತ ದೇವಸ್ಥಾನದಲ್ಲಿ ಲಕ್ಷಬಿಲ್ವಾರ್ಚನೆ ಕಾರ್ಯಕ್ರಮ         ಹಮ್ಮಿಕೊಳ್ಳಲಾಗಿದೆ.ಈ ಅಧಿಕ ಮಾಸವು ದಿನಾಂಕ: 18-09-2020 ರಿಂದ ಒಂದು ತಿಂಗಳಪರ್ಯಂತ ಜರಗುವುದು ಎಂದು ದೇವಸ್ಥಾನದ ಅರ್ಚಕರು ಈ ಮೂಲಕ ತಿಳಿಸಿದ್ದಾರೆ.   

      
                       ಅಧಿಕ ಮಾಸ ಎಂದ ತಕ್ಷಣ ಸಹಜವಾಗಿ ಎಲ್ಲರು ನಾಡಿನಲ್ಲಿರುವ ಕೇದಾರನಾಥ, ಬದರಿನಾಥ,ತಿರುಮಲೈ,ಶ್ರೀಶೈಲ ಹೀಗೆ ಹತ್ತು ಹಲವಾರು ತೀರ್ಥಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುವ ವಾಡಿಕೆ ಇದೆ, ಆದರೆ ಪ್ರಸ್ತುತ ದೇಶದಲ್ಲಿ ಕೊವಿಡ್ ಕಾರಣದಿಂದ ಇತ್ತೀಚಿಗಷ್ಟೇ ಸರಕಾರವು ಲಾಕಡೌನ ಸಡಿಲಗೊಳಿಸಿದೆ. ಆದರೂ ಸಹ ಸರಕಾರ ಮಾತ್ರ ಕೊರೋನಾ ನಿಯಂತ್ರಣದ ಸಲುವಾಗಿ ಎಲ್ಲರಿಗೂ ಅನವಶ್ಯಕವಾಗಿ ಹೊರಗಡೆ ತಿರುಗಾಡಲು ನಿರ್ಭಂಧಹೇರಿದೆ.ಅವಶ್ಯಕತೆ ಇದ್ದವರು ಮಾತ್ರ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ ಕಾರ್ಯ ಮುಗಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಿದೆ. ಸರಕಾರವು ನಮ್ಮೆಲ್ಲರ ಸುರಕ್ಷತೆ ಹಿತದೃಷ್ಟಿಯಿಂದ ಈ ಎಲ್ಲ ಕ್ರಮಕೈಕೊಂಡಿದೆ ಎಂಬುದು ತಮಗೆಲ್ಲ ತಿಳಿದ ಸಂಗತಿ. ಕಾರಣ ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲ ರಿಸ್ಕ ತಗೆದುಕೊಂಡು ಬೇರೆ ಬೇರೆ ದೇವಸ್ಥಾನಗಳಿಗೆ ಹೋಗುವದಕ್ಕಿಂತ ಲೋಕಕಲ್ಯಾಣಕ್ಕಾಗಿ ಹಾಗೂ ಈ ವಿಶ್ವ ಕರೋನಾ ಮುಕ್ತವಾಗಲಿ ಎಂಬ ಸದುದ್ದೇಶದಿಂದ ತೇರದಾಳ ಪಟ್ಟಣದಲ್ಲಿ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಅರ್ಚಕರು ಈ ಪವಿತ್ರ ಅಧೀಕ ಮಾಸದಲ್ಲಿ ಶ್ರೀ ಅಲ್ಲಮಪ್ರಭುಗಳ ಸನ್ನೀಧಿಗೆ ಲಕ್ಷಬಿಲ್ವಾರ್ಚನೆ ಅರ್ಪಿಸುವ ಕಾರ್ಯಕೈಗೊಂಡಿದ್ದಾರೆ. ಈ ಲಕ್ಷ ಬಿಲ್ವಾರ್ಚನೆಯ   ಸೇವೆಯನ್ನು ಭಕ್ತರು ಮಾಡಬಹುದು. ಕಾರಣ ಎಲ್ಲ ಭಕ್ತಾಧಿಗಳು ಈ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರೆ ತಾವು ಬಯಸಿದ ಎಲ್ಲಾ ದೇವರ ದರ್ಶನವನ್ನು ಇಲ್ಲಿಯೇ ಮಾಡಿದಂತಾಗುತ್ತದೆ ಎನ್ನಬಹುದು. ಕಾರಣ ನಾಡಿನಲ್ಲಿರುವ ಸದ್ಭಕ್ತರು ನಾಡಿನ ಒಳಿತಿಗಾಗಿ ಕೈಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಪ್ರಭುವಿನ ಕೃಪೆಗೆ ಪಾತ್ರರಾಗಬೇಕು ಅಂತಾ ಅರ್ಚಕರು ಈ ಮೂಲಕ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಶ್ರೀ ಅಲ್ಲಮ ಪ್ರಭುದೇವರ ಅರ್ಚಕರ ಮೋ.ನಂ.:-9739572510 ಗೆ ಸಂಪರ್ಕಿಸಬಹುದು.(ಆನ್‍ಲೈನ್ ಸೇವೆ ಸಹ ಲಭ್ಯವಿದೆ)  .