ಬನಹಟ್ಟಿಯಲ್ಲಿ ಮೊಬೈಲ್ ಟಾವರ್ ವಿರೋಧಿಸಿ ಸಾರ್ವಜನಿಕರು ನಗರಸಭೆ ಅಧಿಕಾರಿ ಬಂದೇನವಾಜ್ ಡಾಂಗೆಯವರಿಗೆ ಮನವಿ ಸಲ್ಲಿಸಿದರು.
ಮೊಬೈಲ್ ಟಾವರ್ ನಿರ್ಮಾಣ ವಿರೋಧಿಸಿ ಮನವಿ ರಬಕವಿ-ಬನಹಟ್ಟಿ,ಸೆ6: ಬನಹಟ್ಟಿಯ ಮಂಗಳವಾರ ಪೇಟೆಯ ಜನವಸತಿ ಹಾಗು ನಗರದ ಮಧ್ಯ ಭಾಗದಲ್ಲಿ ಮೊಬೈಲ್ ಕಂಪನಿಯು ಕಾನೂನು ಬಾಹಿರವಾಗಿ ಟಾವರ್ ನಿರ್ಮಿಸುತ್ತಿರುವದನ್ನು ವಿರೋಧಿಸಿ ದಿಢೀರ್ ಪ್ರತಿಭಟನೆಗಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗೆ ಮನವಿ ಸಲ್ಲಿಸಿದ ಘಟನೆ ರವಿವಾರ ಜರುಗಿತು.
ಇತ್ತೀಚೆಗೆ ಪಟ್ಟಣದಲ್ಲಿ 10 ಕ್ಕೂ ಅಧಿಕ ಮೊಬೈಲ್ ಟಾವರ್‍ಗಳು ಆಸ್ಪತ್ರೆ, ಶಾಲಾ ಕಾಲೇಜು, ವಾಣಿಜ್ಯ ಕಟ್ಟಡ, ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಿತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವದೇ ಕ್ರಮ ಜರುಗಿಸುತ್ತಿಲ್ಲವೆಂದು ಸುರೇಶ ಇಂಗಳೆ ಬೇಸರ ವ್ಯಕ್ತಪಡಿಸಿದರು. ಮೊಬೈಲ್ ಟಾವರ್‍ಗಳಿಂದ ಹೊರ ಹೊಮ್ಮುವ ವಿಕಿರಣದಿಂದ ಅಲ್ಲಿ ವಾಸಿಸುವ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಣಿಮಾ ಬೀರುತ್ತಿದ್ದು, ನಿಯಮ ಮೀರಿ ಇಂತಹ ಹಾನಿಕಾರಕ ಟಾವರ್‍ಗಳನ್ನು ತಿಂಗಳೊಳಗೆ ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ನಗರಸಭೆ ಅಧಿಕಾರಿ ಬಂದೇನವಾಜ್ ಡಾಂಗೆಯವರಿಗೆ ಸಾರ್ವಜನಿಕರು ಮನವಿ ಅರ್ಪಿಸಿದರು. ಇದೇ ಸಂದರ್ಭ ಕಿರಣ ಆಳಗಿ, ಅರುಣ ಕುಲಕರ್ಣಿ, ಪ್ರಕಾಶ ಶೆಟ್ಟಿ, ಸುರೇಶ ಪತ್ತಾರ, ಆನಂದ ಕುಲಕರ್ಣಿ, ಈಶ್ವರ ಬಾಗಲಕೋಟ, ರಾಜು ಪತ್ತಾರ, ಶ್ರೀಶೈಲ ಹಣಗಂಡಿ, ಕಿರಣ ಹುನ್ನೂರ, ಶ್ರೀಧರ ತೆಲಸಂಗ, ಅವಿನಾಶ ಬಾಗಲಕೋಟ ಸೇರಿದಂತೆ ಅನೇಕರಿದ್ದರು.
Social Plugin