ಬನಹಟ್ಟಿ ಪೊಲೀಸ್ ಠಾಣೆ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿಯವರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಅರ್ಪಿಸಿದರು.
ಡ್ರಗ್ಸ್ ದಂಧೆಗಿಳಿದವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ
ರಬಕವಿ-ಬನಹಟ್ಟಿ,ಸೆ5: ಡ್ರಗ್ಸ್ ಜಾಲದ ಹಿಂದೆ ಸಮಾಜದ ಘಟಾನುಘಟಿಗಳು ಭಾಗಿಯಾಗಿದ್ದರ ಹಿನ್ನಲೆ ತನಿಖೆ ಚುರುಕುಗೊಂಡಿದ್ದಲ್ಲದೆ ಚಿತ್ರೋದ್ಯಮದೊಂದಿಗೆ ನಂಟಿನ ಪಾತ್ರ ಮತ್ತಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಿರುವ ಹಿನ್ನಲೆ ಡ್ರಗ್ಸ್ ಜಾಲವನ್ನು ಸಂಪೂರ್ಣ ಬೇಧಿಸಿ ಕೆಲವರ ಕರಾಳ ಮುಖವನ್ನು ಬಯಲು ಮಾಡುವದರ ಜೊತೆಗೆ ದೇಶದ್ರೋಹಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಎಬಿವಿಪಿ ರಬಕವಿ-ಬನಹಟ್ಟಿ ಕಾರ್ಯದರ್ಶಿ ಧರೆಪ್ಪ ಕುಂಬಾರ ಹೇಳಿದರು.
ಬನಹಟ್ಟಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿಯವರಿಗೆ ಮನವಿ ಅರ್ಪಿಸಿ ಮಾತನಾಡಿದ ಅವರು, ಮಾದಕ ವಸ್ತು ಹಾನಿಕಾರಕವೆಂದು ಗೊತ್ತಿದ್ದರೂ ಯುವಜನತೆ ಸ್ವಾಸ್ಥ್ಯ ಹದಗೆಡಿಸುವಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡ ಎದ್ದು ಕಾಣುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆಯಾಗುವಲ್ಲಿಯೂ ರಾಜ್ಯದಲ್ಲಿ ಸುಸಜ್ಜಿತ ಜಾಲವಾಗಿ ತಯಾರಾಗಿದ್ದು, ಇವೆಲ್ಲವನ್ನು ಮಟ್ಟಹಾಕುವ ಮೂಲಕ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದಲ್ಲಿ ಇದನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯವಾಗಲಿದೆ ಎಂದರು.
ಎಬಿವಿಪಿ ಕಾರ್ಯಕರ್ತರಾದ ಹೇಮಂತ ಮಳಲಿ, ಸಾಗರ ಜಿಡ್ಡಿಮನಿ, ಲಕ್ಷ್ಮಣ ಕುಳ್ಳೂರ, ವಿಜಯ ಮಂಡಿ, ದಾನೇಶ ತಂಬಾಕು, ದರ್ಶನ ಕೋಪರ್ಡೆ, ಅರ್ಜುನ ಜಿಡ್ಡಿಮನಿ, ಸಾಗರ ಕವಳ್ಳಿ ಇದ್ದರು.
Social Plugin