ತೇರದಾಳ ಪಟ್ಟಣದ ಜೀರಗೇರಿಯ ದಂಡೆಯ ಮೇಲಿರುವ ಕುಡಚಿ ಜಮಖಂಡಿ ರಸ್ತೆಯ ಮೇಲೆ ನೀರು ನಿಂತಿರುವ ಸ್ಥಳದಲ್ಲಿಪುರಸಭೆಯವರು ಗರಸು ಹಾಕುತ್ತಿರುವುದು. 

ಫಲಶೃತಿ
ರಸ್ತೆಯ ಮೇಲೆ ನಿಂತ ನೀರಿಗೆ ಗರಸು ಹಾಕಿದರು 
ತೇರದಾಳ : ಪಟ್ಟಣದ ಜೀರಗೇರಿಯ ದಂಡೆಯ ಮೇಲಿರುವ ಕುಡಚಿ ಜಮಖಂಡಿ ರಸ್ತೆಯ ಮೇಲೆ ಚರಂಡಿ ನೀರು ಹಾಗೂ ಮಳೆಯ ನೀರು ನಿಂತು ಕೆರೆಯಂತೆಯಾಗಿದ್ದನ್ನು ವಾಹಿನಿಯು ಪ್ರಕಟ ಮಾಡಿದ್ದನ್ನು ಕಂಡು ಪುರಸಭೆಯವರು ಇಂದು ಮುಂಜಾನೆ ಗರಸು ಹಾಕಿ ರಸ್ತೆಯನ್ನು ದುರಸ್ತಿಗೊಳಿಸಿದರು. 
   ದಿ.13ರಂದು ಸ್ವರೂಪ ಸಂದರ್ಶನ ಯೂಟ್ಯೂಬ್ ಚಾನಲ್ "ರಸ್ತೆಯ ಮೆಲೆ ನೀರು ನಿಂತು ಕೆರೆಯಾದ ರಸ್ತೆ"   ಎಂಬ ಶಿಷರ್ಗಿಕೆಯಡಿಯಲ್ಲಿ ಪ್ರಕಟಗೊಂಡ ಜೀರಗೇರಿ ಕೆರೆಯ ದಂಡೆಯ ಮೇಲೆ ಇರುವ ಕುಡಚಿ ಜಮಖಂಡಿ ರಸ್ತೆಯ ಮೇಲೆ ಚರಂಡಿ ನೀರು ಹಾಗೂ ಮಳೆಯ ನೀರು ಸಂಗ್ರಹವಾಗಿ ವಾಹನ ಸವಾರರಿಗೆ ಭಾರಿ ತೊಂದರೆಯಾಗಿತ್ತು. ಅದನ್ನು ವಾಹಿನಿಯು ಸುದ್ದಿಯನ್ನು ಮಾಡಿತ್ತು. ಅದನ್ನು ಓದಿದ ಪುರಸಭೆ ಅಧಿಕಾರಿಗಳು ಸೋಮವಾರ ಮುಂಜಾನೆ ಗರಸನ್ನು ತಂದು ಹಾಕಿ ರಸ್ತೆಯ ದುರಸ್ತಿ ಕಾರ್ಯ ಮಾಡಿದ್ದಾರೆ. ಇದರಿಂದ ವಾಹನ ಸವಾರರು ಖುಷಿ ಪಟ್ಟು ವಾಹಿನಿಗೆ ಅಭಿನಂದನೆ ತಿಳಿಸಿದರು. ಇದೇ ರೀತಿ ಕೆಲವು ವಾರ್ಡಗಳಲ್ಲಿ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಸಂಚರಿಸಲು ತೊಂದರೆ ಪಡುತ್ತಿದ್ದಾರೆ ವಾರ್ಡಗಳಲ್ಲಿಯೂ ಸಹ ಬೀದಿ ದೀಪಗಳನ್ನು ಅಳವಡಿಸಿದರೆ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಿದಂತಾಗುತ್ತದೆ.
   ಡಾ.ಪದ್ಮಜೀತ ನಾಡಗೌಡಪಾಟೀಲ ಮಾತನಾಡಿ ರಸ್ತೆ ದುರಸ್ತಿ ಮಾಡಿದ ಪುರಸಭೆಯವರು ಈ ರೀತಿಯಾದ ಹಲವಾರು ರಸ್ತೆಗಳು ಕೆಟ್ಟು ಹೋಗಿವೆ. ಮಳೆಯಿಂದ ಮುಖ್ಯ ರಸ್ತೆಗಳು ಕಟ್ಟು ಹೋಗಿವೆ ಹಾಗೂ ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆಗಳು ಹದೆ ಗೆಟ್ಟು ಹೋಗಿದ್ದ ಕಾರಣ ಹರ ಸಾಹಸ ಪಡುತ್ತಿದ್ದಾರೆ. ಅವುಗಳ ಕಡೆ ಪಿಡ್ಬೂಡಿ, ಜಿಎಲ್‍ಬಿಸಿ ಯವರಾಗಲಿ, ಪುರಸಭೆಯವರಾಗಲಿ ಗಮನ ಹರಿಸಿದರೆ ರೈತರಿಗೂ ಅನುಕೂಲವಾಗುವುದು ಎಂದರು.