ಕಲಾ ಜಗತ್ತಿಗೆ ಬಹುದೊಡ್ಡ ಹೊಡೆತ - ಉಮಾಶ್ರೀ
ರಬಕವಿ-ಬನಹಟ್ಟಿ,ಸೆ26: ಎಸ್ ಪಿ ಬಾಲಸುಬ್ರಮಣ್ಯ ಅವರು ಕಲಾ ಜಗತ್ತಿನ ದೇಶ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದಂತಹ ಮಹಾನ ಕಲಾ ಸಾಮ್ರಾಟರಾಗಿದ್ದರು ಅವರು ಅನೇಕ ಬಾಷೆಗಳಲ್ಲಿ ಹಾಡನ್ನು ಹಾಡುವುದರ ಮೂಲಕ ಪ್ರತಿಯೊಬ್ಬರ ಜನಮಾನಸದಲ್ಲಿಯೂ ಕೂಡಾ ಇತಿಹಾಸ ಸೃಷ್ಠಿ ಮಾಡಿ ಹೋಗಿದ್ದಾರೆ. ಇತಿಹಾಸವನ್ನು ಎಷ್ಠ ತಲೆಮಾರುಗಳಾದರೂ ಮರೆಯಲು ಸಾಧ್ಯವಿಲ್ಲ. ಅಂತಹ ಒಂದು ಚರಿತ್ರೆ ನಿರ್ಮಿಸಿ ಹೋಗಿದ್ದಾರೆ. ಅವರುಅತ್ಯಂತ ಮಾನವೀಯ ಗುಣವುಳ್ಳವರು, ಅತ್ಯಂತ ಹಾಸ್ಯಭರಿತವಾಗಿ ಎಲ್ಲರನ್ನು ನಗಿಸುತ್ತಾತಮ್ಮ ಸುತ್ತ ಮುತ್ತಲೀನ ವಾತಾವರಣವನ್ನು ಸಂತೋಷ ಭರಿತವಾಗಿಟ್ಟು ಕೊಳ್ಳುವ ಸಹೃದಯಿಯಾಗಿದ್ದರು. ಅವರು ಎನೆಲ್ಲ ಕಲಿತಿದ್ದರು, ಉತ್ತಮ ಪಂಡಿತರಾಗಿದ್ದರೂ ನಾನು ಬಹಳ ಸಣ್ಣವನು ಎಂಬ ಬಾವನೆಯಲ್ಲಿಯೇ ಬದುಕಿದವರು ಅಂತಹ ಮಹಾನ ಜೀವ ನಮ್ಮ ಜೊತೆಯಲ್ಲಿ ಇಲ್ಲ ಇದು ನಮ್ಮ ಕಲಾ ಜಗತ್ತಿಗೆ ಬಹುದೊಡ್ಡ ಹೊಡೆತ. ಈ ಕರೋನಾ ನಮ್ಮ ಸಂಗಿತ ಲೋಕದ ಮಹಾನ ಸಾಮ್ರಾಟನ್ನು ಕರೆಯಿಸಿಕೊಂಡಿದ್ದು ನಮ್ಮ ದುರ್ದೈವ. ಹಾಗಾಗಿ ಇಂತಹ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ  ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.-
- ಉಮಾಶ್ರೀ ಖ್ಯಾತ ಚಿತ್ರನಟಿ, ಮಾಜಿ ಸಚಿವರು, ತೇರದಾಳ ಮತಕ್ಷೇತ್ರದ ಮಾಜಿ ಶಾಸಕರು