ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯು ವೈದ್ಯರು ಹಾಗು ಸಿಬ್ಬಂದಿಗಳಿಲ್ಲದೆ ಬಿಕೋ ಎನ್ನುತ್ತಿರುವದು.
ಬಾರದ ಹೊರಗುತ್ತಿಗೆದಾರರು: ಸಂಕಷ್ಟದಲ್ಲಿ ರೋಗಿಗಳು
ರಬಕವಿ-ಬನಹಟ್ಟಿ,ಸೆ25: ವಿವಿಧ ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಗುತ್ತಿಗೆ ಹಾಗು ಹೊರ ಗುತ್ತಿಗೆ ನೌಕರರ ಸಂಘದಿಂದ ಸೆ.24 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಸಂಬಂಧ ಸಂಘದ ವತಿಯಿಂದ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಮೂವರು ವೈದ್ಯರು, ನಾಲ್ವರು ನರ್ಸ್, ಇಬ್ಬರು ಚಾಲಕರು, ಆರು ಜನ ಕೌನ್ಸಲರ್, ಗ್ರೂಪ್ ಡಿ ನಾಲ್ವರು ಸೇರಿದಂತೆ 25 ಕ್ಕೂ ಅಧಿಕ ಜನರು ಸೇವೆ ಸಲ್ಲಿಸುತ್ತಿದ್ದಾರೆ. ಎರಡೇ ದಿನಗಳಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಹೇಳತೀರದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಲ್ಲಿ ಕಾರಣವಾಗಿದೆ.
ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರು ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿ ಹಲವು ವರ್ಷಗಳಿಂದ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಕಳೆದ ಮೂರು ತಿಂಗಳ ಹಿಂದೆ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗಾಗಿ ಅಚಿತಿಮ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರಕ್ಕೆ ನಮ್ಮ ಬೇಡಿಕೆ ಬಗೆಹರಿಸುವ ಮನಸ್ಸು ಇದ್ದಂತೆ ಕಾಣುತ್ತಿಲ್ಲವೆಂದು ಎಂದು ಗುತ್ತಿಗೆ ನೌಕರರಿಂದ ತಿಳಿಸಿದರು.
ಮೊದಲೇ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ಜನತೆಗೆ ವೈದ್ಯರ ಹಾಗು ಸಿಬ್ಬಂದಿಗಳ ದಿಢೀರ್ ಮುಷ್ಕರ ಕಂಟಕವಾಗಿದೆ. ಇದೀಗ ಆಸ್ಪತ್ರೆಯಲ್ಲಿ ಆಗಮಿಸುವ ಸಿಬ್ಬಂದಿಗಳಿಗೆ ಪೂರಕವಾದ ವ್ಯವಸ್ಥೆಯಾಗುವಲ್ಲಿ ಸಮಸ್ಯೆ ಎದುರಾಗುತ್ತಿದೆ.
Social Plugin