ಬನಹಟ್ಟಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯರಿಂದ ಸನ್ಮಾನ ಸ್ವೀಕರಿಸಿದ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ನಭಿಸಾಬ್ ನದಾಫ್ ಮಾತನಾಡಿದರು.
ಬಿಜೆಪಿ ಯಾವ ಧರ್ಮದ ವಿರೋಧಿಯೂ ಅಲ್ಲ
ರಬಕವಿ-ಬನಹಟ್ಟಿ,ಸೆ26: ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಕ್ರೈಸ್ತ-ಮುಸ್ಲಿಂ ಧರ್ಮಿಯರೂ ಬಿಜೆಪಿಯಲ್ಲಿದ್ದಾರೆ. ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತಾ ದೇಶದ ಅಭಿವೃದ್ಧಿಯನ್ನಷ್ಟೇ ಮಂತ್ರವಾಗಿ ಮುನ್ನಡೆಯುತ್ತಿರುವ ಪಕ್ಷ ಬಿಜೆಪಿ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ನಭಿಸಾಬ್ ನದಾಫ್ ಹೇಳಿದರು.
ಇಂದು ತೇರದಾಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಿಂದ ನಿರೀಕ್ಷಣಾ ಮಂದಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಗುಜರಾತ್ ಸೇರಿದಂತೆ ದೇಶಾದ್ಯಂತ ಮುಸಲ್ಮಾನ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಇದ್ಯಾವದಕ್ಕೂ ಮಣೆ ಹಾಕದ ಅಲ್ಪಸಂಖ್ಯಾತರು ಮತ್ತೊಮ್ಮೆ ಬಿಜೆಪಿಯಿಂದ ಪ್ರಧಾನಿಯನ್ನಾಗಿಸಲು ಶ್ರಮಿಸಿದ್ದಾರೆಂದರು.
ಪಕ್ಷದ ತತ್ವ ಸಿದ್ಧಾಂತಕ್ಕೆ ಹಾಗು ವಿಚಾರಕ್ಕೆ ನಾವೆಲ್ಲರೂ ಬದ್ಧರಾಗಿ ತೇರದಾಳ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಬೇಕೆಂದು ಹೇಳಿದರು.
ರಬಕವಿ-ಬನಹಟ್ಟಿ ಅಲ್ಪಸಂಖ್ಯಾತ ಘಟಕದ ಮೋರ್ಚಾ ಅಧ್ಯಕ್ಷ ಡಾ. ಮಲಿಕ್‍ಜಾನ್ ಬಾರಿಗಿಡದ, ಡಾ, ಅಕ್ಬರ್ ತಾಂಬೋಳಿ, ಮೆಹಬೂಬ್ ತಾಂಬೋಳಿ, ನಿಯಾಜ್ ಜಕಾತಿ, ಮುರಾದ ಮೋಮಿನ್, ಮಿಯಾ ಜಕಾತಿ ಸೇರಿದಂತೆ ಅನೇಕರಿದ್ದರು.

Social Plugin