ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಸಮಸ್ತ ಅರ್ಚಕರು ಶ್ರೀಜಗದ್ಗುರು ರಂಭಾಪುರಿ ಶ್ರಿಗಳು ಕೊರೊನಾದಿಂದ ಬೇಗ ಗುಣಮುಕ್ತರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ತೇರದಾಳ : ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನ ಸಮಸ್ತ ಅರ್ಚಕರು ಹಾಗೂ ಭಕ್ತ ಸಮೂಹದವರೆಲ್ಲರೂ ಸೇರಿ ಇಂದು ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠ ಬಾಳೆಹೊನ್ನೂರು ಇವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಅರ್ಚಕರಾದ ಮಗಯ್ಯ ಸ್ವಾಮಿ ತೆಳಗಿನಮನಿ ಮಾತನಾಡಿ ಕೊರೊನಾ ಇಡೀ ದೇಶದ ತುಂಬೆಲ್ಲ ವ್ಯಾಪಿಸಿ ತಲ್ಲಣಗೊಳಿಸಿದೆ. ಅದರಂತೆ ಈ ಸೋಂಕು ಯಾರನ್ನು ಬಿಡದೇ ಎಲ್ಲರಿಗೂ ಕಾಡುತ್ತಲಿದೆ. ಈಗ ರಂಭಾಪೂರಿ ಶ್ರೀಗಳಿಗೆ ಸೋಂಕು ಅಂಟಿಕೊಂಡಿದ್ದು, ಶ್ರೀಗಳು ಬೇಗನೆ ಗುಣಮುಖರಾಗಲಿ ಎಂದು ಹೇಳಿದರು.
ರೇವಣೇಶ ಹಿರೇಮಠ ಮಾತನಾಡಿ ಮಹಾಮಾರಿ ಕೊರೊನಾ ಸೋಂಕು ಅವರಿವರೆನ್ನದೆ ಎಲ್ಲರನ್ನು ಆವರಿಸುತ್ತಲಿದೆ. ಜಗದ್ಗುರು ರಂಭಾಪುರಿ ಶ್ರೀಗಳಿಗೆ ಸೋಂಕು ತಗುಲಿದ್ದು ನಮಗೆ ಆತಂಕ ಸೃಷ್ಟಿಸಿದೆ. ಅವರು ಬೇಗನೆ ಕೊರೊನಾದಿಂದ ಗುಣಮುಖರಾಗಲಿ ಎಂದು ಶ್ರೀಅಲ್ಲಮಪ್ರಭುಗಳಲ್ಲಿ ಬೇಡಿಕೊಂಡರು.
ಅರ್ಚಕರಾದ ಆನಂದ ಹಿತ್ತಲಮನಿ, ಮಗಯ್ಯ ಹಿತ್ತಲಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಶೈಲ ತೆಳಗಿನಮನಿ, ಅಲ್ಲಯ್ಯ ದೊಡಮನಿ, ರಾಜು ಹಿತ್ತಲಮನಿ, ಬಸವರಾಜ ಸ್ಥಾವರಮಠ, ಬಸಯ್ಯ ಭಾವಿ, ಈಶ್ವರಯ್ಯ ಬೃಂಗಿ, ರಾಜಶೇಖರ ಹಿರೇಮಠ, ರಮೇಶ ಅವರಾದಿ, ಮಲ್ಲಪ್ಪಣ್ಣ ಮುಕರಿ, ಆಯ್.ಆಯ್.ಯಾದವಾಡ, ಎಮ್.ಸಿ.ಕುಂಚಗನೂರ, ಡಾ.ಕುಪಾಟೆ ಸೇರಿದಂತೆ ಅರ್ಚಕರು ಹಾಗೂ ಸಮಸ್ತ ಸಕಲ ಸದ್ಭಕ್ತರು ಇದ್ದರು.
Social Plugin