ರಬಕವಿ-ಬನಹಟ್ಟಿ ಪತ್ರಕರ್ತರ ಸಂಘದಿಂದ ತೇರದಾಳ ಶಾಸಕ ಸಿದ್ದು ಸವದಿಯವರಿಗೆ ಪತ್ರಿಕಾ ಭವನಕ್ಕಾಗಿ ಮನವಿ ಅರ್ಪಿಸಲಾಯಿತು.
ಪತ್ರಕರ್ತರ ಭವನ ನಿರ್ಮಾಣಕ್ಕೆ ಶಾಸಕರಿಗೆ ಮನವಿ *ಸ್ಪಂದಿಸಿದ ಸಿದ್ದು ಸವದಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ರಬಕವಿ-ಬನಹಟ್ಟಿ,ಸೆ6: ಸರ್ಕಾರದಿಂದ ಪತ್ರಕರ್ತರ ಭವನ ನಿರ್ಮಾಣ ಮಾಡಲು ನಿವೇಶನದೊಂದಿಗೆ ಕಟ್ಟಡ ಒದಗಿಸಬೇಕೆಂದು ರಬಕವಿ-ಬನಹಟ್ಟಿ ಪ್ರತ್ರಕರ್ತರ ಸಂಘದ ಅಧ್ಯಕ್ಷ ನೀಲಕಂಠ ದಾತಾರ ಮನವಿ ಅರ್ಪಿಸಿದರು.
ರವಿವಾರ ಬೆಳಿಗ್ಗೆ ಸ್ಥಳೀಯ ಶಾಸಕ ಸಿದ್ದು ಸವದಿಯವರ ನಿವಾಸಕ್ಕೆ ತೆರಳಿ ಮನವಿ ಅರ್ಪಿಸಿದ ಸರ್ವ ಸದಸ್ಯರು, ರಬಕವಿ-ಬನಹಟ್ಟಿ ನೂತನ ತಾಲೂಕಾಗಿದ್ದು, ಇದೀಗ ಗ್ರಾಮೀಣ ಹಾಗು ಪಟ್ಟಣಗಳ ಜನತೆ, ರಾಜಕಾರಣಿ ಹಾಗು ಇತರೆ ಶೋಷಿತರಿಗೆ ಪತ್ರಿಕಾಗೋಷ್ಠಿ ನಡೆಸಲು ಯಾವದೇ ಕಟ್ಟಡವಿಲ್ಲದ ಕಾರಣ ಕೂಡಲೇ ನಿವೇಶನ ಹಾಗು ಕಟ್ಟಡ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ ಉತ್ತಮ ಪತ್ರಿಕರ್ತರ ಭವನ ರೂಪಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ, ಇದು ಸಮಯೋಚಿತವಾಗಿದ್ದು, ಇದರ ಬಗ್ಗೆ ಈಗಾಗಲೇ ತಿಳಿದಿದೆ. ಸೂಕ್ತ ವ್ಯವಸ್ಥೆಯೊಂದಿಗೆ ಸುಸಜ್ಜಿತ ಭವನ ನಿರ್ಮಿಸುವ ಮೂಲಕ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಕರ್ತರ ಬೇಡಿಕೆಗೆ ಸ್ಪಂದಿಸುವದಾಗಿ ಪ್ರತಿಕ್ರಿಯಿಸಿದರು. ಇದೇ ಸಂದರ್ಭ ಶಿವಾನಂದ ಮಹಾಬಳಶೆಟ್ಟಿ, ಮಲ್ಲಿಕಾರ್ಜುನ ತುಂಗಳ, ಬಸಯ್ಯ ವಸ್ತ್ರದ, ಕಿರಣ ಆಳಗಿ, ಚಿದಾನಂದ ಕಾರಜೋಳ, ಶಂಭುಲಿಂಗ ಗುಣಕಿ, ವಿಶ್ವಜ ಕಾಡದೇವರ, ಗಂಗಾಧರ ಹಿರೇಮಠ, ಮಹಾದೇವ ಕೋಪರ್ಡೆ, ಪ್ರಕಾಶ ಕುಂಬಾರ, ಯಶವಂತ ವಾಘಮೋರೆ ಸೇರಿದಂತೆ ಅನೇಕರಿದ್ದರು.
Social Plugin