ತೇರದಾಳ  ದೇವರಾಜ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೇರದಾಳ ಪೂರ್ವ, ಪಶ್ಚಿಮ ಹಾಗೂ ಗೋಲಭಾವಿ ವಲಯದ ಶಿಕ್ಷಕರಿಗಾಗಿ ಹಮ್ಮಿಕೊಂಡ ನಲಿಕಲಿ ಸಮಗ್ರ ಹಾಗೂ 6-8 ನೇತರಗತಿ ವಿಷಯಾಧಾರಿತ ಮತ್ತು ಜೀವನ ಕೌಶಲದ  ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ತರಬೇತಿಗಳು ಬೋಧನೆಗೆ ಸಹಕಾರಿ

ತೇರದಾಳ: ತರಬೇತಿಗಳು ಬೋಧನೆಗೆ ಸಹಕಾರಿಯಾಗಲಿವೆ ಎಂದು ಸಿಆರ್‍ಪಿ ಎಸ್.ಬಿ.ಹಡಪದ ಹೇಳಿದರು.
   ಅವರು ತೇರದಾಳ  ದೇವರಾಜ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೇರದಾಳ ಪೂರ್ವ, ಪಶ್ಚಿಮ ಹಾಗೂ ಗೋಲಭಾವಿ ವಲಯದ ಶಿಕ್ಷಕರಿಗಾಗಿ ಹಮ್ಮಿಕೊಂಡ ನಲಿಕಲಿ ಸಮಗ್ರ ಹಾಗೂ 6-8 ನೇತರಗತಿ ವಿಷಯಾಧಾರಿತ ಮತ್ತು ಜೀವನ ಕೌಶಲದ  ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಅವರು ಕ್ಲಿಷ್ಟಕರ ವಿಷಯಗಳನ್ನು ತರಬೇತಿಯಲ್ಲಿ ಚರ್ಚಿಸುವುದರಿಂದ ಸರಳ ಹಾಗೂ ಪರಿಣಾಮಕಾರಿ ಬೋಧನೆಗೆ ನೆರವಾಗಲಿದೆ ಎಂದರು.
  ಅತಿಥಿ ಸಿಆರ್‍ಪಿ ಆರ್.ಎ..ನ್ಯಾಮಗೌಡ ಮಾತನಾಡಿ ಶಿಕ್ಷಕರು ಬೋಧನಾ ಕೌಶಲ  ಜೊತೆಗೆ ಜೀವನ ಕೌಶಲ ಅಧ್ಯಯನದಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸಲು ಸಹಕಾರಿಯಾಗುವುದು ಎಂದರು.
   ಅಧ್ಯಕ್ಷತೆ ವಹಿಸಿದ್ದ ತೇರದಾಳ ದೇವರಾಜ ನಗರದ ಎಂಪಿಎಸ್ ಶಾಲೆ ಮುಖ್ಯಗುರುಗಳಾದ ಎಸ್.ವ್ಹಿ.ಗೋಠೆಕರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ತಂತ್ರಜ್ಞಾನದ ಉಪಯೋಗ ಮಾಡಿಕೊಂಡು ಬೋಧನಾ ಕೌಶಲ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮತ್ತಷ್ಟು ಪರಿಣಾಮಕಾರಿ ಬೋಧನೆಗೆ ನೆರವಾಗುವುದು ಎಂದರು.
 ಅತಿಥಿ ಎ.ಕೆ.ವನಮಾನೆ ಗುರುಗಳು ಮಾತನಾಡಿ, ತರಬೇತಿಯಲ್ಲಿ ಪಡೆದ ಜ್ಞಾನ ವರ್ಗದ ಕೋಣೆಗೆ ತಲುಪುವಂತಾಗಲಿ ಎಂದರು.
  ಅತಿಥಿಗಳಾಗಿ ಮಾಜಿ ಪುರಸಭೆ ಸದಸ್ಯರಾದ ರಾಜು ನಗಾರ್ಜಿ, ಮಾಜಿ ಎಸ್‍ಡಿಎಂಸಿ ಅಧ್ಯಕ್ಷರಾದ ಸದಾಶಿವ ಸಿಂಗೆ,ಆರ್.ಎಲ್.ಪತ್ತಾರ, ಪಿ.ಎ.ಮೋಪಗಾರ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ ಹವಾಲ್ದಾರ, ಯು.ಜೆ.ಐಗಳಿ, ಕೆ.ಸಿ.ದೊಡಮನಿ, ಎಚ್.ಆರ್.ಮಂಜುನಾಥ,ಪಿ.ಸಿ.ನಿರ್ವಾಣಿ,ಎ.ಎ.ನಾಯಕವಾಡಿ,ಆರ್.ಆರ್.ದೇಸಾಯಿ, ಆರ್.ಟಿ.ಪೋತದಾರ, ಬಿ.ಆರ್.ಕೊಪ್ಪದ ಕಾರ್ಯ ನಿರ್ವಹಿಸಿದರು.
ಶಿಕ್ಷಕಿ  ಕೆ.ಎಂ.ಆಸಂಗಿ  ಪ್ರಾರ್ಥನೆ ಮಾಡಿದರು, ಶಿಕ್ಷಕ ಆಯ್.ಪಿ.ಕುಂಬಾರ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಧನಂಜಯ ಜಮಖಂಡಿ ವಂದಿಸಿದರು.