ರಬಕವಿ-ಬನಹಟ್ಟಿ ತಾಲೂಕು ತಳವಾರ ಸಮಾಜದವರು ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ ಅವರಿಗೆ ಮನವಿ ಅರ್ಪಿಸಿದರು. ತಳವಾರ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ತಹಶೀಲ್ದಾರಗೆ ಮನವಿ ರಬಕವಿ-ಬನಹಟ್ಟಿ,ಸೆ4: ತಳವಾರ ಸಮಾಜದವರಿಗೆ ಪರಿಷಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ರಬಕವಿ-ಬನಹಟ್ಟಿ ತಹಶೀಲ್ದಾರಗೆ ರಬಕವಿ-ಬನಹಟ್ಟಿ ತಾಲೂಕು ತಳವಾರ ಸಮಾಜದವರು ಮನವಿ ಅರ್ಪಿಸಿದರು. ದಿ. 31.08.2020 ರ ಸುತ್ತೋಲೆಯಲ್ಲಿ ಪರಿಶಿಷ್ಟ ಪಂಗಡದ ಪರಿವಾರ ಮತ್ತು ತಳವಾರ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಎಚ್. ಕುಲಕರ್ಣಿ ಅವರು ಅದೇಶ ಹೊರಡಿಸಿದ್ದಾರೆ. ಹಾಗೂ ಕೇಂದ್ರ ಸರಕಾರವು ದಿ. 20.03.2020 ರಂದು ರಾಜ್ಯಪತ್ರವನ್ನು ಹೊರಡಿಸಿದ್ದು, ಅದರಂತೆ ತಳವಾರ ಸಮುದಾಯಕ್ಕೆ ಆದಷ್ಟೂ ಬೇಗನೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ ಮನವಿ ಸ್ವೀಕರಿಸಿದರು. ಯಲ್ಲಪ್ಪ ತಳವಾರ, ಎಂ. ಎಸ್. ತಳವಾರ, ಆರ್. ಎಲ್. ತಮದಡ್ಡಿ, ಶಿವಾನಂದ ದೇಸಾಯಿ, ಎಸ್. ಕೆ. ತಳವಾರ, ಭೀಮಸಿ ತಳವಾರ, ಅರ್ಜುನ ಪಣದಿ, ಶಿವರಾಯ ಕುಸಬಿ, ಕಾಡಪ್ಪ ತಳವಾರ, ದೇವೆಂದ್ರ ಅಸ್ಕಿ, ಎಸ್. ಎಸ್. ದರೂರ, ರವಿ ತಳವಾರ, ಎಚ್. ಬಿ. ತಳವಾಋ, ವಾಯ್. ಎಚ್. ತಳವಾರ, ಸದಾಶಿವ ಗಡೆನ್ನವರ, ಸುಭಾಸ ತಳವಾರ ಸೇರಿದಂತೆ ಅನೇಕರು ಇದ್ದರು.
Social Plugin