ರಬಕವಿ ಹೊಸ್ ಬಸ್ ನಿಲ್ದಾಣದಲ್ಲಿ ಕಟ್ಟದ ಛಾವಣಿ ಖುಷಿದು ಬಿಳುತ್ತಿರುವ ಚಿತ್ರ. 

ಮೈ ಮರೆತರೆ ಬಸ್‍ನಿಲ್ದಾಣದಲ್ಲಿ ಸಾವು ಖಚಿತ.ಸ ನಿತ್ಯವೂ ಛಾವಣಿ ಕುಸಿಯುತ್ತಿದೆ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ4: ರಬಕವಿ ನಗರದ ಹೊಸ್ ಬಸ್‍ನಿಲ್ದಾಣ ಹೆಸರಿಗೆ ಮಾತ್ರ ಹೊಸ ಬಸ್‍ನಿಲ್ದಾಣ ಆದರೆ ನಿಲ್ದಾಣದ ಮೇಲಚಾವಣಿ ಸಂಪೂರ್ಣ ಹಳೆಯದಾಗಿ ಖುಸಿದು ಬಿಳುತ್ತಿದೆ. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲುವುದಾಗಲಿ, ವಿಶ್ರಾಂತಿ ಪಡೆಯುವುದಾಗಲಿ ಮಾಡಬೇಕಾದರೆ ಭಯದಲ್ಲಿಯೇ ನಿಲ್ಲುವಂತಾಗಿದೆ.

ಕಳೆದವಾರವಷ್ಟೆ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತ ನಿಂತ ಮೂಡಲಗಿ ಗ್ರಾಮದ ಪರಸುರಾಮ ಹುಡೇದ ಎಂಬುವವರ ತಲೆಮೇಲಿಯೇ ಸಿಸಿ ಕಳಚಿ ಬಿದ್ದ ಕಾರಣ ಸ್ಥಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಸ್ಥಳಿಯರು ತಿಳಿಸಿದರು. ಹೀಗೆ ನಿಲ್ದಾಣದ ಅನೇಕ ಕಡೆಗಳಲ್ಲಿ ಈ ರೀತಿ ಛಾವಣಿ ನಿತ್ಯ ಉದುರಿ ಉದರಿ ಬಿಳುತ್ತಲೆ ಇದೆ. ಚಿಕ್ಕ ಮಕ್ಕಳು, ವೃದ್ದರು ನಿಲ್ದಾಣದಲ್ಲಿ ಭಯದಲ್ಲಿ ನಿಲ್ಲುವಂತಾಗಿದೆ.
ನಿಲ್ದಾಣದ ಹೊರಭಾಗದಲ್ಲಿ ಉತ್ತಮ ಪರಿಸರ ವಾತಾವರಣ ನಿರ್ಮಿಸಿದ್ದಾರೆ, ಸಂಸ್ಥೆಯ ಸಿಬ್ಬಂದಿಗಳು ಲಾಕ್‍ಡೌನ್ ಸಂದರ್ಬದಲ್ಲಿ ನಿಲ್ದಾಣದಲ್ಲಿ ಅನೇಕ ಜಾತಿಯ ಗಿಡಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಿಸಿದ್ದಾರೆ. ಆದರೆ ನಿಲ್ದಾಣದ ಕಟ್ಟಡ ಮಾತ್ರ ತುಂಬಾ ಹಳೆಯದಾಗಿ ಛಾವಣಿ ಎಲ್ಲೆಂದರಲ್ಲಿ ಖುಸಿದು ಬಿಳುತ್ತಿರುವುದು ಮಾತ್ರ ಇದಕ್ಕೆ ಮಾರಕವಾಗಿದೆ.
ಲಾಕ್‍ಡೌನ ಆದ ಬಳಿಕ ಬಸ್‍ನಲ್ಲಿ ಏರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಸೆ. ಮೊದಲವಾರದಿಂದ ನೆರೆಯ ಮಹಾರಾಷ್ಟ್ರಕ್ಕೆ ಬಸ್‍ಗಳ ಸೇವೆ ಆರಂಭವಾಗಬೇಕಾಗಿದ್ದು, ಇದರಿಂದ ಪ್ರಯಾಣಿಕರ ಸಂಖ್ಯೆ ಕೂಡಾ ಇಳಿಮುಖವಾಗಿದೆ. ಕೂಡಲೆ ಸಂಬಂದಿಸಿದ ಅಧಿಕಾರಿಗಳು ಇದರತ್ತ ಗಮನ ಹರಿಸಿ ಕಟ್ಟಡ ದುರಸ್ತಿ ಅಥವಾ ಸಂಪೂರ್ಣ ಡೆಮಾಲೇಶನ ಮಾಡಿ ಹೊಸ ನಿಲ್ದಾಣ ನಿರ್ಮಿಸಿಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಅತೀ ಶೀಘ್ರದಲ್ಲಿ ನಿಲ್ದಾಣವನ್ನು ನವಿಕರಿಸಲಾಗುವುದು, ಇಲಾಖೆಯಲ್ಲಿ ಸಂಬಂದಿಸಿದ ಇಂಜಿನಿಯರವರ ಗಮನಕ್ಕೆ ತಂದು ಕಟ್ಟಡವನ್ನು ಪರೀಶಿಲಿಸಿ ಡೆಮೋಲೇಶನ ಮಾಡುವ ಪ್ರಸ್ತಾವನೆ ಕೂಡಾ ಕಳಿಸಲಾಗಿದೆ. ಅಲ್ಲಲ್ಲಿ ಕೊದರಿ ಬಿಳುವ ಸ್ಥಳಗಳನ್ನು ಕೆತ್ತಿ ತೆಗೆಯಲಾಗಿದೆ. ಅಲ್ಲದೆ ಕ್ಷೇತ್ರದ ಶಾಸಕ ಸಿದ್ದು ಸವದಿಯವರು ಕೂಡಾ ಹೊಸ ನಿಲ್ದಾಣದ ಪ್ರಸ್ತಾವನೆಗೆ ಆದೇಶ ಕೂಡಾ ಮಾಡಿದ್ದಾರೆ. ಎಸ್. ಎಸ್. ತೇಲಿ. ಡಿಪೋ ಮ್ಯಾನೇಜರ್, ಕೆಎಸ್‍ಆರ್‍ಟಿಸಿ. ಜಮಖಂಡಿ.
`ರಬಕವಿ ಹಾಗೂ ಬನಹಟ್ಟಿ ನಗರಗಳ ಎರಡೂ ಬಸ್‍ನಿಲ್ದಾಣಗಳನ್ನು ಸಂಪೂರ್ಣ ನೆಲಸಮ ಮಾಡಿ ವಿನೂತಮಾದರಿಯ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಈಗಾಲೆ ಪ್ರಸ್ತಾವನೆ ಕಳಿಸಲಾಗಿದೆ. ಅತೀ ಶೀಘ್ರದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.’--- ಸಿದ್ದು ಸವದಿ. ಶಾಸಕರು. ತೇರದಾಳ ಕ್ಷೇತ್ರ.