ಬನಹಟ್ಟಿಯಲ್ಲಿ ನಡೆದ ತೇರದಾಳ ವಿಧಾನ ಸಭಾ ಮತಕ್ಷೇತ್ರದ ಆರೋಗ್ಯ ಹಸ್ತ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ.ನಂಜಯ್ಯನಮಠ ಉದ್ಘಾಟಿಸಿದರು.


ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ
ದೇಶದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ
ಸರ್ವ ಧರ್ಮಗಳ ರಕ್ಷಕ ಕಾಂಗ್ರೆಸ್ 
ಜನರಿಗೆ ಬದುಕುವ ಶಕ್ತಿಯನ್ನು ಕೊಟ್ಟಿದ್ದೆ ಕಾಂಗ್ರೆಸ್
ರಬಕವಿ-ಬನಹಟ್ಟಿ,ಸೆ4: ಕಾಂಗ್ರೆಸ್ ಪಕ್ಷ ಈ ದೇಶದ ಜನರಿಗೆ ಬದುಕುವ ಶಕ್ತಿಯನ್ನು ನೀಡಿದೆ. ಕಾಂಗ್ರೆಸ್ ಸರ್ಕಾರ ನೀಡಿದ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಈ ದೇಶದ ಸಾಮಾನ್ಯ ಜನರು ಕೂಡಾ ಬ್ಯಾಂಕುಗಳಿಗೆ ಬರುವಂತೆ ಮಾಡಿದ್ದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಸರ್ಕಾರ ಎಂದು ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ.ನಂಜಯ್ಯನಮಠ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ತೇರದಾಳ ವಿಧಾನಸಭಾ ಮತಕ್ಷೇತ್ರದ ಆರೋಗ್ಯ ಹಸ್ತ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವಾದ, ಸಮತಾವಾದ ಮತ್ತ ಸಮಾನತೆಯನ್ನು ನೀಡಿದ್ದೇ ಕಾಂಗ್ರೆಸ್ ಸರ್ಕಾರ. ದೇಶದ ಜನರಿಗೆ ಉದ್ಯಮಶೀಲತೆ ಮತ್ತು ಇಪ್ಪತ್ತು ಅಂಶಗಳ ಕಾರ್ಯಕ್ರಮಗಳು, ದೇಶದ ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸಿದ್ದು ಮತ್ತು ಇಲ್ಲಿಯ ಜನರಿಗೆ ಭೂಮಿಯ ಮಾಲೀಕತ್ವವನ್ನು ನೀಡದ್ದೆ ಕಾಂಗ್ರೆಸ್ ಸರ್ಕಾರ ಎಂದು ನಂಜಯ್ಯನಮಠ ತಿಳಿಸಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಬಿಜೆಪಿಯವರು ರಾಜಕೀಯ ವ್ಯಾಪಾರ ಎಂದು ಹೇಳಿದರೆ, ಕಾಂಗ್ರೆಸ್ ರಾಜಕೀಯ ಒಂದು ಸೇವೆಯಾಗಿದೆ ಎಂದು ಹೇಳಿದೆ. ದೇಶದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಪ್ರಜಾಪ್ರಭುತ್ವವ ಸರ್ವ ನಾಶವಾಗುತ್ತಿದೆ. 
ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೋತ್ತರ ಚರ್ಚೆಯನ್ನು ರದ್ದು ಮಾಡಿದ್ದು ಅದು ನಮ್ಮ ಪ್ರಜೆಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಬಿಜೆಪಿ ದೇಶದ ಯುವ ಜನತೆಯ ಮಾರ್ಗವನ್ನು ತಪ್ಪಿಸುತ್ತಿದೆ ಎಂದು ಉಮಾಶ್ರೀ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಎ.ಆರ್.ಬೆಳಗಲಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಡಾ.ಸಂಗಮೇಶ ಬಬಲೇಶ್ವರ, ಡಾ.ಪ್ರತಿಭಾ ಮುರಗೋಡ ಮತ್ತು ಬಸವರಾಜ ಶಿಗ್ಗಾವಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ರಾಜೇಂದ್ರ ಭದ್ರನವರ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಅಶೋಕ ಆಳಗೊಂಡ, ರಂಗನಗೌಡ ಪಾಟೀಲ ಇದ್ದರು. 
ಮಾರುತಿ ಸೋರಗಾವಿ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಸಂಗಪ್ಪ ಕುಂದಗೋಳ, ಸಂಜಯ ಅಮ್ಮಣಗಿಮಠ, ಸತ್ಯಪ್ಪ ಮಗುದಮ್, ಬಸವರಾಜ ಗುಡೋಡಗಿ, ದಾನಪ್ಪ ಹುಲಜತ್ತಿ, ಅಶೋಕ ಉಳ್ಳಾಗಡ್ಡಿ, ಭರಮು ಉಳ್ಳಾಗಡ್ಡಿ, ಮಾಳು ಹಿಪ್ಪರಗಿ ಸೇರಿದಂತೆ ಅನೇಕರು ಇದ್ದರು.