ತೇರದಾಳ ಪಟ್ಟಣದ ದತ್ತ ಮಂದಿರದಲ್ಲಿ ಅಧಿಕ ಮಾಸದ ನಿಮಿತ್ಯ ಶ್ರೀಶಾರದಾ ಭಜನಾ ಮಂಡಳಿಯವರು ಭಜನೆ ಹಾಗೂ ಆರತಿ ಕಾರ್ಯಕ್ರಮ ನೆರವೇರಿಸಿದರು.


ದತ್ತ ಮಂದಿರದಲ್ಲಿ ಅಧಿಕ ಮಾಸದ ಕಾರ್ಯಕ್ರಮಗಳು

ತೇರದಾಳ : ಸಾರ್ವರಿನಾಮ ಸಂವತ್ಸರ ಅಧಿಕ ಮಾಸದ ಪ್ರಯುಕ್ತ ಪಟ್ಟಣದ ದತ್ತ ಮಂದಿರದಲ್ಲಿ ಶ್ರೀಶಾರದಾ ಭಜನಾ ಮಂಡಳಿಯವರಿಂದ ಭಜನೆ, ಸಂಗೀತ ಹಾಗೂ ಆರತಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿರುತ್ತವೆ.

   ದತ್ತ ಮಂದಿರದಲ್ಲಿ ಅಧಿಕ ಮಾಸದ ಆರಾಧ್ಯ ದೇವತೆ ಅಧಿಕ ಲಕ್ಷ್ಮೀ ದೇವತೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಧಿಕ ಮಾಸದ ಒಂದು ತಿಂಗಳ ಪರ್ಯಂತರ ದತ್ತ ಮಂದಿರದಲ್ಲಿ ಶ್ರೀಶಾರದಾ ಭಜನಾ ಮಂಡಳಿಯವರಿಂದ ದಿನಾಲು ಭಜನೆ, ಸಂಗೀತ ಹಾಗೂ ಆರತಿ ಕಾರ್ಯಕ್ರಮಗಳು ನಡೆಯುತ್ತಿವೆ. ಲೋಕಕಲ್ಯಾಣಕ್ಕಾಗಿ ಮತ್ತು ಕೊರೊನಾ ವೈರಾಣುವಿನ ನಿರ್ಮೂಲನೆಗಾಗಿ ಹಾಗೂ ಸ್ತ್ರೀಕುಲ ಉದ್ಧಾರಕ್ಕಾಗಿ ಈ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಪುರಸಭೆ ಮಾಜಿ ಸ್ಥಾಯಿ ಸಮೀತಿ ಚೇರಮನ್ ಅಂಜಲಿ ಕುಲಕರ್ಣಿ ಪತ್ರಿಕೆಗೆ ಹೇಳಿದರು. ದಿನಾಲು ಸಾಯಂಕಾಲ ದತ್ತ ಮಂದಿರದಲ್ಲಿ ಖ್ಯಾತ ಗಾಯಕಿ ಜಯಶ್ರೀ ದೇಶಪಾಂಡೆ ಇವರ ನೇತೃತ್ವದಲ್ಲಿ ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ನಂತರ ಆರತಿ ಕಾರ್ಯಕ್ರಮ ನೆರವೇರಿದ ನಂತರ ಮಹಿಳೆಯರಿಂದ ಕೋಲಾಟ ನಡೆಯುತ್ತಿದೆ. ಕೋವಿಡ್ 19ರಿಂದಾಗಿ ಇಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸುವುದರ ಜೊತೆಗೆ ಒಂದು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

   ಈ ಸಂದರ್ಭದಲ್ಲಿ ಡಾ.ಶೋಭಾ ದೇಶಪಾಂಡೆ, ಲೀಲಾ ದೇಶಪಾಂಡೆ, ಗೀತಾ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಅವಣಿ ಕುಲಕರ್ಣಿ, ಅಮೃತಾ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.