ತೇರದಾಳ ಪಟ್ಟಣದ ಕನ್ನಡ ಶಾಲೆಯ ಹತ್ತಿರ ಭಾಜಪ ಕಾರ್ಯಕರ್ತರು ನಿನ್ನೆ ನಿಧನರಾದ ಸಚಿವ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಚಿವ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ

ತೇರದಾಳ : ರೇಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿಯವರು ಬುಧವಾರ ಚಿಕಿತ್ಸೆ ಫಲಿಸದೆ ನಿಧನರಾದರು ಅವರಿಗೆ ಪಟ್ಟಣದ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಕನ್ನಡ ಶಾಲೆಯ ಹತ್ತಿರ ಸಚಿವ ಅಂಗಡಿಯವರ ಭಾವ ಚಿತ್ರದ ಮುಂದೆ ಮೆಂಬತ್ತಿ ಹಚ್ಚಿ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಅಕ್ಕಿವಾಟ, ರಾಜ್ಯದಲ್ಲಿ ರೇಲ್ವೆ ಅಭಿವೃದ್ಧಿ ಮಾಡಬೇಕು ಎಂದು ಪಣ ತೊಟ್ಟಿರುವ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅವರು ಅಜಾತ ಶತ್ರುವಾಗಿದ್ದರು. ಹೊಸ ರೇಲ್ವೆ ಮಾರ್ಗಗಳ ನಿರ್ಮಾಣ, ಮಾರ್ಗಗಳ ಉನ್ನತಿಕರಣ, ವಿದ್ಯುದ್ದೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರನ್ನು ಕಳೆದುಕೊಂಡ ಪಕ್ಷಕ್ಕೆ ಭಾರಿ ನಷ್ಟವಾಗಿದೆ ಎಂದರು. 

   ಈ ಸಂದರ್ಭದಲ್ಲಿ ನಿಂಗಪ್ಪ ಮಾಲಗಾವಿ, ಮಹಾವೀರ ಕೊಕಟನೂರ, ಪ್ರಭು ಬಾಗಿ ಸದಾಶಿವ ಹೊಸಮನಿ, ಆಕಾಶ ತೇಲಿ, ಶೀತಲ ಬೋಳಗೊಂಡ, ಸುರೇಶ ಪರೀಟ, ಶಂಕರ ಕುಂಬಾರ, ಸಿದ್ದು ಅಮ್ಮನಗಿ, ಭೀಮಶಿ ಹಿರೇಕುರುಬರ ಸೇರಿದಂತೆ ಇನ್ನಿತರರು ಇದ್ದರು.