ಯರಗಟ್ಟಿ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಗ್ರಾಮೀಣಾಭಿವೃದ್ಧಿ ಸಂಘಟನೆಯ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ನಡೆಯಿತು.
ಶ್ರೀ ಮಹರ್ಷಿ ಭಗೀರಥ ಗ್ರಾಮೀಣಾಭಿವೃದ್ಧಿ ಸಂಘಟನೆಯ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ
ರಬಕವಿ-ಬನಹಟ್ಟಿ,ಸೆ7: ಸಮೀಪದ ಯರಗಟ್ಟಿ ಗ್ರಾಮದಲ್ಲಿ ಗ್ರಾಮದೇವತೆ ಲಕ್ಕಮ್ಮ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಮಹರ್ಷಿ ಭಗೀರಥ ಗ್ರಾಮೀಣಾಭಿವೃದ್ಧಿ ಸಂಘಟನೆಯ ಆಶ್ರಯದಲ್ಲಿ
ಪ್ರತಿಭಾ ಪುರಸ್ಕಾರ ಹಾಗೂ ಕೆ ಆರ್ ಯು ಎಂ ಎಸ್ ಸಂಘಟನೆಯ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಯ9ಕ್ರಮವನ್ನು ಶ್ರೀ ಮಹರ್ಷಿ ಭಗೀರಥರ ಭಾವ ಚಿತ್ರ ಪೂಜೆ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ 2019-2020ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದಲ್ಲಿ 80% ಕಿಂತ ಹೆಚ್ಚಿನ ಫಲಿತಾಂಶ ಪಡೆದು ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುಂಡಲೀಕ ಗೋಪಾಳಿ ಮಾತನಾಡಿ, ಪ್ರತಿ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವದಾಗಿ ತಿಳಿಸಿದರು ಹಾಗೂ ಕೆ ಆರ್ ಯು ಎಂ ಎಸ್ ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಸಮಾಜದ ಅಧ್ಯಕ್ಷರಾದ ಭೀಮಶಿ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಾಗಲಕೋಟೆಯ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ)ದ ಜಿಲ್ಲಾ ಸಂಚಾಲಕರಾದ ರಾಘವೇಂದ್ರ ನೀಲನ್ನವರ ಕೆ ಆರ್ ಯು ಎಂ ಎಸ್ ಸಂಘಟನೆಯು ಹಮ್ಮಿಕೊಂಡಿರುವ ವಿವಿಧ ಉದ್ದೇಶಗಳ ಮಾಹಿತಿ ತಿಳಿಸಿದರು.
ಸಮಾರಂಭದಲ್ಲಿ ಸ್ಥಳೀಯ ಸಂಘಟನೆಯ ಕಾರ್ಯದರ್ಶಿ ಮಂಜುನಾಥ ಕೊಡಗನೂರ, ಪಿ. ಜಿ ಕಾಖಂಡಕಿ, ರಾಯಪ್ಪ ಹೆಗ್ಗನ್ನವರ, ಶಂಕರ ಪಾಟೀಲ, ಚಂದ್ರು ಹೆಗ್ಗನ್ನವರ, ಕೆ ಆರ್ ಯು ಎಂ ಎಸ್ ನ ರಬಕವಿ ಬನಹಟ್ಟಿ ತಾಲೂಕಿನ ಸಂಚಾಲಕ ಬಸವರಾಜ ಮಲ್ಲೊಡಿ ಇದ್ದರು. ಪ್ರವೀಣ್ ಪಾಟೀಲ ನಿರೂಪಿಸಿದರು. ಮಂಜುನಾಥ ಕೊಡಗನೂರ ವಂದಿಸಿದರು.

Social Plugin