ಬನಹಟ್ಟಿಯ ತೋಟದ ಶಾಲೆಯಲ್ಲಿ ಮೋದಿಯವರ ಜನ್ಮ ದಿನಾಚರಣೆ ನಿಮಿತ್ತ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
ರಬಕವಿ-ಬನಹಟ್ಟಿ,ಸೆ22: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರು ಗಿಡ ಮರಗಳನ್ನು ಉಳಿಸಿ ಬೆಳೆಸಬೇಕು. ಉತ್ತಮ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈ ಜೋಡಿಸಿ ಎಂದು ರಬಕವಿ-ಬನಹಟ್ಟಿ ಮಂಡಳದ ರೈತ ಮೋರ್ಚಾ ಅಧ್ಯಕ್ಷ ಈಶ್ವರ ಬಿರದಾರಪಾಟೀಲ ಹೇಳಿದರು.
ನಗರದ ತೋಟದ ಶಾಲೆಯಲ್ಲಿ ಮೋದಿಯವರ ಜನ್ಮ ದಿನಾಚರಣೆ ನಿಮಿತ್ತ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೋದಿಯವರ ಜನ್ಮದಿನಾಚರಣೆ ನಿಮಿತ್ತ ಒಂದು ವಾರಗಳ ಕಾಳ ವಿಶೇಷ ಕಾರ್ಯಕ್ರಮಗಳನ್ನು ಮೋರ್ಚಾ ವತಿಯಿಂದ ಹಾಕಿಕೊಂಡಿದೆವೆ ಎಂದರು.
ಈ ಸಂದರ್ಭದಲ್ಲಿ ಭೀಮಸಿ ಪಾಟೀಲ, ಶ್ರೀಶೈಲ ಪೂಜಾರಿ, ಮಲಕಪ್ಪ ಪಾಟೀಲ, ಶೇಖರ ಅಥಣಿ, ನಿಂಗಪ್ಪ ಹೆಗ್ಗಳಗಿ, ಮಹಾದೇವ ಗೌಡಪ್ಪನವರ, ಮಹಾದೇವ ಪಾಟೀಲ, ಪಾಲಬಾಂವಿ ಸರ್, ರಾಜು ಶಿವಮನಿ ಸೇರಿದಂತೆ ಅನೇಕರು ಇದ್ದರು.

Social Plugin