ರಬಕವಿ ಬ್ರಹ್ಮಾನಂದ ಆಶ್ರಮದಲ್ಲಿ ಏರ್ಪಡಿಸಿದ ವಿಶ್ವ ಓಜೋನ್ ದಿನಾಚರಣೆ ಅಂಗವಾಗಿ ಗುರುಸಿದ್ದೇಶ್ವರ ಶ್ರೀಗಳು ಗಿಡ ನೆಡುವುದರ ಚಾಲನೆ ನೀಡಿದರು.

ಓಜೋನ್ ರಕ್ಷಣೆ ನಮ್ಮೇಲ್ಲರ ಕರ್ತವ್ಯವಾಗಬೇಕು; ಗುರುಸಿದ್ಧೇಶ್ವರ ಶ್ರೀಗಳು

ರಬಕವಿ-ಬನಹಟ್ಟಿ,ಸೆ16: ಭೂಮಂಡಲವನ್ನು ಆವರಿಸಿರುವ ಓಜೋನ್ ಪದರ ಭೂಮಿಯನ್ನು ಮತ್ತು ಭೂಮಿಯ ಮೇಲಿರುವ ಕೋಟಿ-ಕೋಟಿ ಜೀವರಾಶಿಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸಲು ಓಜೋನ್ ಪದರದ ಕಾಯಕ ಬಹುಮುಖ್ಯವಾದುದು.  ಮುಂದಿನ ಪೀಳಿಗೆ ಆರೋಗ್ಯವಾಗಿರಲು ನಾವೆಲ್ಲರೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಓಜೋನ್ ಪದರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವೆಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ರಬಕವಿ ಬ್ರಹ್ಮಾನಂದ ಆಶ್ರಮದಲ್ಲಿ ಬುಧುವಾರ ವಿಶ್ವ ಓಜೋನ್ ದಿನದ ಆಚರಣೆ ನಿಮಿತ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದಲ್ಲಿ ಮಾನವ ತನ್ನ ಅಭಿವೃದ್ಧಿ ಹಾಗೂ ವಾಣಿಜ್ಯ ಬೆಳವಣಿಗೆ ಸಂಬಂಧಿ ಯೋಜನೆಗಳು, ತಂತ್ರಜ್ಞಾನಗಳು, ಕೈಗಾರಿಕೆ ಸೇರಿದಂತೆ ಅನೇಕ ಚಟುವಟಿಕೆಗಳಿಂದ ಹೊರಹೋಗುವ ರಾಸಾಯನಿಕ ಮತ್ತು ವಿಷಕಾರಕ ವಸ್ತಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಓಜೋನ್ ಪದರದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಈ ಕಾರಣದಿಂದ ಈ ಪದರ ದಿನೆ ದಿನೆ ಕ್ಷೀಣಿಸುತ್ತಿದ್ದು, ಮುಂದೊಂದು ದಿನ ಇದು ಭೂಮಂಡಲ ಮತ್ತು ಅದರಲ್ಲಿರುವ ಜೀವಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಖಂಡಿತಾ ಇದೆ. ಆದ್ದರಿಂದ ಅದರ ರಕ್ಷಣೆಯ ಕೆಲಸ ನಮ್ಮದಾಗಬೇಕು ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಓಜೋನ್ ಪದರವನ್ನು ರಕ್ಷಿಸುವ ದೃಷ್ಟಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1994 ರಿಂದ ವಿಶ್ವ ಓಜೋನ್ ದಿನವನ್ನಾಗಿ ಸೆ.16 ರನ್ನು ಆಯ್ಕೆ ಮಾಡಿಕೊಂಡು ಆಚರಿಸುತ್ತಾ ಬಂದಿದ್ದಾರೆ. ಕೆಲವರು ಈ ತಿಂಗಳ ಕೊನೆಯವರೆಗೂ ಆಚರಿಸುತ್ತಾರೆ. ಆದ್ದರಿಂದ ಎಲ್ಲರೂ ಪರಿಸರವನ್ನು ಬೆಳೆಸಿ ಓಜೋನ್ ಪದರದ ರಕ್ಷಣೆಗೆ ನಮ್ಮದೇ ಆದ ಕೊಡುಗೆಯನ್ನು ಕೋಡೋಣ ಎಂದು ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಯುವಕರಲ್ಲಿ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಶ್ರೀಮಠದ ಭಕ್ತರಾದ ವಿವೇಕ ಕೋಪರ್ಡೆ ಹಾಗೂ ಹಿರಿಯರು ಇದ್ದರು. ವಿರುಪಾಕ್ಷಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.

.