ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ನಗರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕ ಸಿದ್ದು ಸವದಿ
ಪಕ್ಷ ಸಂಘಟನೆಯೊಂದಿಗೆ ದೇಶದ ಸದೃಢತೆಗೆ ಶ್ರಮಿಸಿ
ರಬಕವಿ-ಬನಹಟ್ಟಿ,ಸೆ15: ಕಾರ್ಯಕರ್ತರ ಪಕ್ಷ ಸಂಘಟನೆಯೊಂದಿಗೆ ದೇಶದ ಸದೃಢತೆಗೆ ಶ್ರಮಿಸಬೇಕಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದಲ್ಲಿನ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ನಗರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದು ಕಾರ್ಯಕರ್ತರಿಗೆ ನವ ಚೈತನ್ಯ ತುಂಬುವ ಕಾರ್ಯಕ್ರಮವಾಗಿದೆ. ಭಾರತೀಯ ಜನತಾ ಪಕ್ಷ ಪ್ರಜಾತಂತ್ರ ಅಡಿಯಲ್ಲಿ ಕೆಲಸ ಮಾಡುವ ಏಕೈಕ ಪಕ್ಷವಾಗಿದೆ. ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿ ವೈಯಕ್ತಿಕವಾಗಿ ಗುರುತಿಸಿಕೊಳ್ಳುವ ಕೆಲಸ ಮಾಡುವುದರೊಂದಿಗೆ ಪಕ್ಷದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮಗೆಲ್ಲ ಪಕ್ಷವೇ ಮೊದಲು. ಅದನ್ನು ಬೆಳೆಸುವ ಕೆಲಸ ಮಾಡಬೇಕು. ಭಾರತೀಯ ಜನತಾ ಪಕ್ಷ ತನ್ನದೇ ಆದ ಸಿದ್ಧಾಂತಗಳ ಮೇಲೆ ನಿಂತಿದೆ. ದೇಶದಲ್ಲಿ ಬಿಜೆಪಿ ಒಂದೇ ಶಾಶ್ವತವಾಗಿ ಉಳಿಯುವ ಪಕ್ಷವಾಗಿದೆ ಎಂದರು.
ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ. ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ ಅವುಗಳನ್ನು ಬದಿಗೊತ್ತಿ, ಪಕ್ಷ ಮತ್ತು ದೇಶಕ್ಕಾಗಿ ವೈಯಕ್ತಿಕ ಸ್ವಾರ್ಥವನ್ನು ಮರೆಯಬೇಕು. ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಿ, ಅಧಿಕಾರಕ್ಕಾಗಿ ಬೆನ್ನು ಹತ್ತ ಬೇಡಿ ಅಧಿಕಾರ ನಮ್ಮ ಬೆನ್ನು ಹತ್ತುವಂತೆ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸೂರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಧ್ಯಾಧರ ಸವದಿ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ತೇರದಾಳ ಗ್ರಾಮೀಣ ಮಂಡಳದ ಅಧ್ಯಕ್ಷ ಸುರೇಶ ಅಕ್ಕಿವಾಟ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈಶ್ವರ ನಾಗರಾಳ, ಆನಂದ ಕಂಪು, ಸಿದ್ದನಗೌಡ ಪಾಟೀಲ, ಮಹಾದೇವ ಕೋಟ್ಯಾಳ, ಹಿರಾಚಂದ ಕಾಸರ, ಬ್ರಿಜ್‍ಮೋಹನ ಡಾಗಾ, ಪರಸಪ್ಪ ಜಿಡ್ಡಿಮನಿ, ದುಂಡಯ್ಯ ಕಾಡದೇವರ, ಸಿದ್ರಾಮಪ್ಪ ಸವದತ್ತಿ, ಮಂಜು ಲೆಂಡಿ, ಮಲ್ಲಪ್ಪ ಆರಗಿ, ರಾಯಪ್ಪ ಹೆಗ್ಗನ್ನವರ, ಪ್ರಭು ಪೂಜಾರಿ, ಶ್ರೀಶೈಲ ಯಾದವಾಡ, ಯಲ್ಲಪ್ಪ ತಳವಾರ, ಆನಂದ ಕಂಪು, ಸಂಗೀತಾ ಖಾನಾಪೂರ, ಶಿವಾನಂದ ಗಾಯಕವಾಡ, ಕುಮಾರ ಕದಂ, ಈರಣ್ಣ ಚಿಂಚಖಂಡಿ, ಗೌರಿ ಮಿಳ್ಳಿ, ಶಾಂತಾ ಸೊರಗಾಂವಿ, ಪವಿತ್ರಾ ತುಕ್ಕನ್ನವರ, ವೈಷ್ಣವಿ ಬಾಗೇವಾಡಿ, ಸುನಿತಾ ನಂದಗೊಂಡ, ಕಮಲಾ ಹಾರೂಗೇರಿ, ರವಿ ಕೊರ್ತಿ, ಅರುಣ ಬುದ್ನಿ, ಅಶೋಕ ಹಳ್ಳೂರ ಸೇರಿದಂತೆ ಅನೇಕರು ಇದ್ದರು.
Social Plugin