ರಬಕವಿ-ಬನಹಟ್ಟಿ,ಸೆ25: ಬಾಗಲಕೋಟೆ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದಲ್ಲಿ ಬೇರುಮಟ್ಟದ ಕಾರ್ಯಕರ್ತರ ಪಡೆ ರೂಪಿಸುವ ಮೂಲಕ ರಾಜ್ಯದ ಮುಖಂಡರೊಂದಿಗೆ ಪಕ್ಷ ಬಲವರ್ಧನೆಗೊಳಿಸಿ ಜಿಲ್ಲೆಯಲ್ಲಿ `ಕುಮಾರ ಪರ್ವ’ವನ್ನು ಮೊಳಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ವಿಶ್ವಾಸ ವ್ಯಕ್ತಪಡಿಸಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ತೇರದಾಳ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರುವ ಗ್ರಾಮ ಪಂಚಾಯ್ತಿ ಚುನಾವಣೆಯ ಪೂರ್ವ ತಯಾರಿಗೆ ಜೆಡಿಎಸ್ ಸಕಲ ಸಿದ್ಧತೆ ನಡೆಸುತ್ತಿದೆ. ಪ್ರತಿ ಭತ್ ಮಟ್ಟದಲ್ಲಿ ಇಬ್ಬರು ಪ್ರತಿನಿಧಿ ನೇಮಕದೊಂದಿಗೆ ತೇರದಾಳ ವಿಧಾನಸಭಾ ಒಳಗೊಂಡು ಆಯಾ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದರು.
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲಿಯೂ ನೇಕಾರರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೊಡುಗೆ ಅಪಾರ. ಪ್ರಚಾರದ ಹಿನ್ನಡೆಯಿಂದಾಗಿ ಪಕ್ಷ ಸಂಘಟನೆಗೆ ಕೊರತೆಯಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಪಕ್ಷದ ಸಮಸ್ಯೆ ಅರಿವಿದೆ. ನಿರಂತರ ಪರಿಶ್ರಮದಿಂದ 4-5 ತಿಂಗಳಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ ಪಕ್ಷ ಗಟ್ಟಿಗೊಳಿಸುವ ಭರವಸೆಯನ್ನು ಮಾವಿನಮರದ ನೀಡಿದರು.
ಪಕ್ಷದ ಮುಖಂಡ ಬಸವರಾಜ ಬಾಳಿಕಾಯಿ ಮಾತನಾಡಿ, ಬೇರುಮಟ್ಟದಲ್ಲಿ ಚರ್ಚಿಸಿ ಪದಾಧಿಕಾರಿಗಳ ನೇಮಕ ನಡೆಯುವದು ಜೆಡಿಎಸ್ ಪಕ್ಷದಲ್ಲಿ ಮಾತ್ರ. ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಆಡಳಿತಕ್ಕೆ ಬರಬೇಕೆಂಬುದು ರೈತ ಹಾಗು ನೇಕಾರರ ಕನಸಾಗಿದೆ. ಇದನ್ನು ನನಸು ಮಾಡುವದೇ ನಮ್ಮ ಕರ್ತವ್ಯವಾಗಿದೆ ಎಂದರು.
ವೇದಿಕೆ ಮೇಲೆ ಪಕ್ಷದ ಮತಕ್ಷೇತ್ರ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ, ಚಿದಾನಂದ ಧರ್ಮಟ್ಟಿ, ಪ್ರಕಾಶ ಸಣಕಾಲ್, ಪರಮೇಶ ಹಡಗಲಿ, ಶಾನೂರ ರಾಮದುರ್ಗ, ಭುಜಬುಲಿ ಕೆಂಗಾಲಿ ಇದ್ದರು.
ಸುರೇಶ ಮಡಿವಾಳರ, ವಿರೇಶ ನ್ಯಾಮಗೌಡ, ಗಂಗಪ್ಪ ಜಕ್ಕನ್ನವರ, ವಿಜುಗೌಡ ಪಾಟೀಲ, ರಾಘವೇಂದ್ರ ಅಂಬಿ, ಶಿವಾನಂದ ಸೊರಗಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
`ತೇರದಾಳ ವಿಧಾನಸಭೆಯಲ್ಲಿ ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಹಾಗು ಪಕ್ಷ ಸಂಘಟನೆ ಸದೃಢ ದೃಷ್ಟಿಯಿಂದ ತೇರದಾಳ ತಾಲೂಕಿಗೂ ನೂತನ ಅಧ್ಯಕ್ಷರ ನೇಮಕ ನಡೆಯಲಿದೆ’.----ಹಣಮಂತ ಮಾವಿನಮರದ, ಅಧ್ಯಕ್ಷರು, ಜೆಡಿಎಸ್ ಜಿಲ್ಲಾಧ್ಯಕ್ಷ.
Social Plugin