ರಬಕವಿ ಕೆಬಿಎಂಪಿಎಸ್‍ನಲ್ಲಿ ನಡೆದಿರುವ ಜೀವನ ಕೌಶಲ ಹಾಗೂ ವಿಷಯಾಧಾರಿತ 10ದಿನಗಳ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಭೇಟಿ ನೀಡಿದ ಜಮಖಂಡಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಮಾತನಾಡಿದರು.
ರಬಕವಿಯಲ್ಲಿ ಜೀವನ ಕೌಶಲ ತರಬೇತಿ ಕಾರ್ಯಾಗಾರ
ರಬಕವಿ-ಬನಹಟ್ಟಿ,ಸೆ25: ಮಕ್ಕಳು ಶಾಲೆಗೆ ಬರುತ್ತಿರಬೇಕಾದರೆ ಅದರ ಸಂಪೂರ್ಣ ಪರಿಚಯ ಶಿಕ್ಷಕರಿಗೆ ಇರಬೇಕು. ಆ ಮಗು ಉತ್ತಮ ನಾಗರಿಕನಾಗಲು ಬೇಕಾದ ಮೌಲ್ಯಗಳನ್ನು ಕಲಿಸಬೇಕು ಎಂದು ಜಮಖಂಡಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಹೇಳಿದರು.
ರಬಕವಿ ಕೆಬಿಎಂಪಿಎಸ್‍ನಲ್ಲಿ ನಡೆದಿರುವ ಜೀವನ ಕೌಶಲ ಹಾಗೂ ವಿಷಯಾಧಾರಿತ 10ದಿನಗಳ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಭೇಟಿ ನೀಡಿದ ಅವರು ಶಿಕ್ಷಕರು ಸಬಲರಾದರೆ ಸಮೃದ್ಧ ಸಿರಿ ನಾಡನ್ನು ಕಟ್ಟಬಹುದು. 2020 ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗ, ಮೌಲ್ಯ, ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಪಠ್ಯದ ಒಂದು ಭಾಗವಾಗಿ ಇವುಗಳನ್ನು ಅಳವಡಿಸುತ್ತಿರುವುದರಿಂದ, ವಿಫಲತೆಗಳನ್ನು ನಿವಾರಿಸಿಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದರು.
ಮಧುರಖಂಡಿ ಸರಕಾರಿ ಪ್ರೌಢಶಾಲೆ ಮುಖ್ಯಗುರುಮಾತೆ ತಾರಾ ಹಕಾರೆ, ಗದ್ಯಾಳ ಪ್ರೌಢಶಾಲೆ ಮುಖ್ಯಗುರು ಎಂ.ಬಿ.ಪಡಿಯನ್ನವರ ವೇದಿಕೆಯಲ್ಲಿದ್ದರು. ಪ್ರಥಮ ಚಿಕಿತ್ಸೆ, ಸದೃಢ ಆರೋಗ್ಯ, ಯೋಗ, ವ್ಯಾಯಾಮ ಇವುಗಳ ಕುರಿತು ಚಿಮ್ಮಡ ಪಾಟೀಲ ತೋಟದ ಶಾಲೆಯ ಶಿಕ್ಷಕ ಎ.ಎಫ್.ಹೂಲಿ, ಸಾರ್ಥಕ ಬದುಕು ಕುರಿತು ಹಿರಿಯ ಶಿಕ್ಷಕರಾದ ಸಿ.ವಿ.ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಮಾತನಾಡಿದರು.
ರಬಕವಿ-ರಾಮಪುರ, ಚಿಮ್ಮಡ ಸಮೂಹ ಸಂಪನ್ಮೂಲ ಕೇಂದ್ರಗಳ ಶಿಕ್ಷಕರು ಪಾಲ್ಗೊಂಡಿದ್ದರು. ರಬಕವಿ ಸಿಆರ್‍ಪಿ ಎಸ್.ಬಿ.ಮೋಮಿನ್ ಸ್ವಾಗತಿಸಿದರು. ರಾಮಪುರ ಸಿಆರ್‍ಪಿ ಎಂ.ಎಂ.ಜಂಗ್ಲಿ ವಂದಿಸಿದರು.
Social Plugin