ರಬಕವಿ-ಬನಹಟ್ಟಿ ಸಮೀಪದ ಹನಗಂಡಿ ಗ್ರಾಮದ ಸಂಗಮೇಶ್ವರ ಹಾಗೂ ದುರ್ಗಾದೇವಿ ದೇವಸ್ಥಾನದ ಎದುರಿನ ರಸ್ತೆ ಸಂಪೂರ್ಣ ಹಾಳಾಗಿ ತಗ್ಗು ಗುಂಡಿಗಳು ಬಿದ್ದ ಚಿತ್ರ.

          ಹನಗಂಡಿ ಗ್ರಾಮದ ರಸ್ತೆ ದುರಸ್ತಿಗೆ ಗ್ರಾಮಸ್ತರ ಒತ್ತಾಯ
ರಬಕವಿ-ಬನಹಟ್ಟಿ,12: ಸಮೀಪದ ಹನಗಂಡಿ ಗ್ರಾಮದ ದುರ್ಗಾದೇವಿ ಹಾಗೂ ಸಂಗಮೇಶ್ವರ ದೇವಸ್ಥಾನ ಎದುರಿನ ರಸ್ತೆ ಹಲವು ವರ್ಷಗಳಿಂದ ಹಾಳಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ, ಕೂಡಲೆ ದುರಸ್ತಿ ಮಾಡುವಂತೆ ಇಲ್ಲಿನ ಗ್ರಾಮಸ್ತರು ಒತ್ತಾಯಿಸಿದ್ದಾರೆ.
ಈ ರಸ್ತೆ ಹಾಳಾಗಿ ಅನೇಕ ವರ್ಷಗಳೇ ಕಳೆದಿವೆ ಆದರೆ ಗ್ರಾಪಂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಹೇಳಬೇಕೆಂದರೆ ಸದಸ್ಯರ ಅವಧಿ ಮುಕ್ತಾಯಗೊಂಡಿದೆ ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತು ಹೋಗಿವೆ ಎಂದು ಇಲ್ಲಿನ ನಿವಾಸಿಗರು ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ನೀರು ಹರಿದು ಮುಂದಕ್ಕೆ ಹೋಗದೆ ನಿಂತಲ್ಲೆ ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗದ ತಾಣವಾಗುತ್ತಿವೆ. ಇದರಿಂದ ಇಲ್ಲಿನ ನಿವಾಸಿಗರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಾಗಿದೆ.
`ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ಚಿಕ್ಕಮಕ್ಕಳು, ವೃದ್ದರು ಇಲ್ಲಿ ತಿರುಗಾಡುವಂತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಇಲ್ಲಿನ ರಸ್ತೆ ದುರಸ್ತಿ ಮಾಡಿ ಜನರ ತೊಂದರೆಯನ್ನು ಸರಿಪಡಿಸಬೇಕು.’-----ಮಲ್ಲಪ್ಪ ತೋಟದ, ಗ್ರಾಮದ ನಿವಾಸಿ.
`ಇಲ್ಲಿನ ಗ್ರಾಮಸ್ಥರಾಗಲಿ ಮತ್ತು ಅಲ್ಲಿನ ನಿವಾಸಿಗರು ರಸ್ತೆ ಹಾಳಾದ ವಿಷಯವನ್ನು ನನ್ನ ಗಮನಕ್ಕೆ ಇಂದಿನವರೆಗೂ ಯಾರೂ ಲಿಖಿತ ರೂಪದಲ್ಲಿ ಹೇಳಿಲ್ಲ. ಒಂದು ವೇಳೆ ರಸ್ತೆಹಾಳಾಗಿ ಜನರಿಗೆ ತೊಂದರೆಯಾಗಿದ್ದರೆ ಅದಕ್ಕೊಂದು ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಸರಿಮಾಡುವ ವ್ಯವಸ್ಥೆ ಮಾಡುತ್ತೇನೆ.’---- ಪಿ.ಪಿ. ರಾವಳ. ಅಭಿವೃದ್ಧಿ ಅಧಿಕಾರಿ, ಹನಗಂಡಿ ಗ್ರಾಪಂ.