ಎಸ್‍ಎಸ್‍ಎಲ್‍ಸಿ: ತಾಲೂಕಿಗೆ ಪ್ರಥಮ ರಬಕವಿ-ಬನಹಟ್ಟಿ,ಸೆ11: ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ನಿರಂತರವಾಗಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದ ರಾಮಪೂರದ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ 619 ಅಂಕಗಳನ್ನು ಪಡೆದು 99.04 ರಷ್ಟು ಅಂಕ ಪಡೆದು ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 617 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ರ್ಯಾಂಕ್ ಪಡೆದಿದ್ದಳು. ವಿದ್ಯಾರ್ಥಿ ಸ್ಪೂರ್ತಿ ಬೆಳ್ಳಿಕಟ್ಟಿ ಶಿಕ್ಷಕರ ಮಾರ್ಗದರ್ಶಿಯಂತೆ ಹಿಂದಿ ಹಾಗು ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನಗೊಳಿಸಲು ಅರ್ಜಿ ಸಲ್ಲಿಸಿದ ಪರಿಣಾಮ ಒಟ್ಟು 2 ಅಂಕಗಳು ಬಂದಿದ್ದು, ಈಗ ಇಂಗ್ಲೀಷ್ 123, ಕನ್ನಡ 100, ಹಿಂದಿ 100, ಗಣಿತ 100, ವಿಜ್ಞಾನ 99 ಹಾಗು ಸಾಮಾನ್ಯ ವಿಜ್ಞಾನ 97 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಹಾಗು ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾಳೆ. `ಆಂಗ್ಲ ಹಾಗು ಕನ್ನಡ ಮಾಧ್ಯಮ ಶಾಲೆ ಹೊಂದಿರುವ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ತಾಲೂಕಿನಲ್ಲಿ ವಿಶೇಷತೆ ಹೊಂದಿದ್ದು, ಶಿಕ್ಷಕರ ಸತತ ಪರಿಶ್ರಮದಿಂದ ಮಕ್ಕಳ ಸಾಧನೆಗೆ ಸಹಕಾರಿಯಾಗುತ್ತಿದೆ.’----ಸಿದ್ದಪ್ಪ ಮೇಣಿ, ಚೇರಮನ್, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ, ರಾಮಪೂರ.
Social Plugin