ಬನಹಟ್ಟಿಯಲ್ಲಿ ನೇಕಾರರ ಹಕ್ಕೊತ್ತಾಯಕ್ಕಾಗಿ ಪ್ರತಿಭಟನಾ ರ್ಯಾಲಿ ಜರುಗಿತು.

ನೇಕಾರ ವರ್ಗಕ್ಕೆ `ಸಮ್ಮಾನ ಯೋಜನೆ’ ದೊರಕಲಿ

*ಅಕ್ರಮ ಮನೆಗಳನ್ನು ಸಕ್ರಮಗೊಳಿಸಿ

ರಬಕವಿ-ಬನಹಟ್ಟಿ,ಸೆ21: ನೇಕಾರರಿಗೆ ನೆರೆ ಪರಿಹಾರ, ಸಾಲಮನ್ನಾ, ಪ್ರಧಾನಮಂತ್ರಿ ಆವಾಸ್ ಯೋಜನೆ, ಜವಳಿ ಸೌಲಭ್ಯ ಸೇರಿದಂತೆ ಪ್ರಮುಖವಾಗಿ `ನೇಕಾರ ಸಮ್ಮಾನ ಯೋಜನೆ’ ಹಾಗು ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ಕಾರ್ಯಗಳೆಲ್ಲವೂ ವಿಳಂಬವಾಗುತ್ತಿರುವ ಹಿನ್ನಲೆ ಸೋಮವಾರ ರಾಜ್ಯ ನೇಕಾರ ಸೇವಾ ಸಂಘದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ಕೇವಲ ಮಗ್ಗಗಳನ್ನು ಹೊಂದಿರುವ ನೇಕಾರನಿಗೆ ಮಾತ್ರ ಸಮ್ಮಾನ ಯೋಜನೆ ಒದಗಿಸುತ್ತಿದ್ದಾರೆ. ಇದರ ಹಿಂದೆ ಕಾಯಕ ಮಾಡುವ ನೂಲು ಸುತ್ತುವರು, ಖಂಡಿಕೆ, ಗಳಿಗೆ ಹೀಗೆ ಅನೇಕ ನೇಕಾರಿಕೆ ಒಳಪಂಗಡದ ಕಾಯಕದವರಿಗೂ ಸಹಾಯ ಧನ ನೀಡಬೇಕೆಂದು ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ಹೇಳಿದರು. 

ಅಕ್ರಮ-ಸಕ್ರಮ ಸ್ಥಗಿತಗೊಂಡಿದ್ದು, ಹಲವಾರು ಸರ್ವೆ ನಂ.ಗಳಲ್ಲಿ ವಾಸವಾಗಿರುವ ನೂರಾರು ಕುಟುಂಬಗಳಿಗೆ ಸಿಟಿಎಸ್ ಉತಾರೆ ಒದಗಿಸಬೇಕು. ಕೆಎಚ್‍ಡಿಸಿಯನ್ನು ಸಾಲದಿಂದ ಮುಕ್ತೊಳಿಸಿ, ನೇಕಾರರಿಗೆ ಪ್ರೋತ್ಸಾಹ ಧನ, ಮಜೂರಿ ಹೆಚ್ಚಳದೊಂದಿಗೆ ಕಾರ್ಮಿಕರೆಂದು ಗುರ್ತಿಸುವದು.

ವಿದ್ಯುತ್‍ನ ದರ ಹಾಗು ಕನಿಷ್ಠ ಶುಲ್ಕ ಹೆಚ್ಚಳಗೊಂಡಿದ್ದು ದರ ಪರಿಷ್ಕರಿಸಬೇಕು. ಆತ್ಮಹತ್ಯೆಯಾದ ನೇಕಾರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸದರಲ್ಲದೆ ನೇಕಾರ ಮಕ್ಕಳಿಗೆ ಶಾಲಾ ಶುಲ್ಕ ಸಂಪೂರ್ಣ ವಿನಾಯ್ತಿ ಹಾಗು ಉನ್ನತ ವ್ಯಾಸಾಂಗಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸರ್ಕಾರ ಪ್ರವೇಶವಾಗಬೇಕು ಸೇರಿದಂತೆ ಅನೇಕ ನೇಕಾರರ ಸಮಸ್ಯೆಗಳನ್ನು ತೋಡಿಕೊಂಡರು.

ಬನಹಟ್ಟಿಯ ಗಾಂಧಿ ವೃತ್ತದಿಂದ ತಹಶೀಲ್ದಾರ ಕಛೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ನಂತರ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಅರ್ಪಿಸಲಾಯಿತು. 

ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ, ಉದಯ ಕುಲಗೋಡ, ಲಕ್ಕಪ್ಪ ಪವಾರ, ಸಂತೋಷ ಮಾಚಕನೂರ, ಶ್ರೀಶೈಲ ಮುಗಳೊಳ್ಳಿ, ಸುರೇಶ ಶೀಲವಂತ, ವಿಠ್ಠಲ ಭಸ್ಮೆ, ಅನ್ನಪೂರ್ಣ ಕೊಣ್ಣೂರ, ಯಲ್ಲವ್ವ ಔಂದಕರ, ನೀಲವ್ವ ನುಚ್ಚಿ, ಜೈನಾಮಾ ಮೊಕಾಶಿ, ಚಂದ್ರಶೇಖರ ಅಕ್ಕಿಮರಡಿ, ಆನಂದ ಜೀರಗಾಳ ಸೇರಿದಂತೆ ಅನೇಕರಿದ್ದರು.