ಬನಹಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸ್ಕ್ರೀನಿಂಗ್ ಮಾಡಲಾಯಿತು. ರಬಕವಿ ಬನಹಟ್ಟಿ: ಗಣಿತ ವಿಷಯಕ್ಕೆ 31 ವಿದ್ಯಾರ್ಥಿಗಳು ಗೈರು ಹಾಜರ
ರಬಕವಿ-ಬನಹಟ್ಟಿ,ಸೆ21: ರಬಕವಿ ಬನಹಟ್ಟಿಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ಆರಂಭಗೊಂಡವು. ಮೊದಲ ದಿನದ ಗಣಿತ ವಿಷಯಕ್ಕೆ 552 ವಿದ್ಯಾರ್ಥಿಗಳು ಹಾಜರಾಗಿದ್ದು, 31 ವಿದ್ಯಾರ್ಥಿಗಳು ಗೈರು ಹಾಜರಾದರು ಎಂದು ಶಿಕ್ಷಣ ಇಲಾಖೆಯ ಇಸಿಓ ಶ್ರೀಶೈಲ ಬುರ್ಲಿ ತಿಳಿಸಿದರು. ಅವರು ಸೋಮವಾರ ಪತ್ರಿಕೆಯ ಜೊತೆಗೆ ಮಾತನಾಡಿ, ಬನಹಟ್ಟಿಯ ಸರ್ಕಾರಿ ಪ್ರೌಢ ಶಾಲೆ, ಎಸ್ಆರ್ಎ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ರಬಕವಿಯ ಎಂ.ವಿ.ಪಟ್ಟಣ ಶಾಲೆಗಳು ಕೇಂದ್ರಗಳಾಗಿವೆ. ಇಲ್ಲಿ ಎಸ್ಓಪಿ ಅಳವಡಿಸಿಕೊಂಡು ಕೋವಿಡ್-19 ಎಲ್ಲ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಎಂ.ಎನ್.ನಾಯಕವಾಡಿ ಮಾತನಾಡಿ, ಇದೇ 21 ರಿಂದ 28ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.
Social Plugin