ರದ್ದಿ ಪೇಪರ್ ಬಂಡಲ್‍ಗೆ ಚಿನ್ನದ ಬೆಲೆ
ರಬಕವಿ-ಬನಹಟ್ಟಿ,ಸೆ5: ದಿನಂಪ್ರತಿ ಓದುವ ಪತ್ರಿಕೆಯ ರದ್ದಿ ಪೇಪರ್ ಪ್ರತಿ 10 ಕೆ.ಜಿ.ಗೆ 150 ರಿಂದ 170 ರೂ.ಗೆ ಮಾರಾಟವಾಗುವದು ಸಹಜವಾಗಿತ್ತು. ಇದೀಗ ಕೇಳಲು ವಿಚಿತ್ರವೆನಿಸಿದರು ನಿಜವಾಗಿಯೂ 260 ರಿಂದ 270 ರೂ.ವರೆಗೆ ಮಾರಾಟವಾಗುತ್ತಿದ್ದು, ಪೇಪರ್ ರದ್ದಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇತ್ತ ಪೇಪರ್ ರದ್ದಿಯೇ ದೊರಕದ ದುಸ್ಥಿತಿಯಲ್ಲಿ ಬೆಲೆಯೂ ಗಗನಕ್ಕೇರಿದೆ.
ಸರ್ಕಾರ ಪ್ಲಾಸ್ಟಿಕ್ ಬಳಕೆ ಮೇಲೆ ನಿರ್ಬಂಧ ಹೇರಿದ್ದು ಈ ರೀತಿ ಬೆಲೆ ಏರಿಕೆಯಾಗುವಲ್ಲಿ ಕಾರಣವೆಂಬುದಾಗಿದ್ದರೆ ಕೊರೊನಾ ಸಂಕಷ್ಟವೂ ಒಂದಾಗಿದೆ.
ಸೀರೆಗಳಿಗೆ ಮಹತ್ವ ರದ್ದಿ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸೀರೆಗಳ ಉತ್ಪಾದನೆಗೆ ಹೆಸರಾದ ಕಾರಣ ನೇಯ್ದ ಸೀರೆಗಳನ್ನು ಗಳಿಗೆ(ಮಡಚುವ) ಕಾರ್ಯ ಸಂದರ್ಭ ಕಾಗದ ಬೇಕೇ ಬೇಕು. ಈ ರೀತಿ ಬೆಲೆ ಗಗನಕ್ಕೇರಿರುವ ಹಿನ್ನಲೆಯಿಂದ ಮೊದಲೇ ಸೀರೆ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಪೇಪರ್ ರದ್ದಿಯ ಬೆಲೆ ಬಿಸಿ ತುಪ್ಪವಾಗಿದೆ.
Social Plugin