ಬನಹಟ್ಟಿಯಲ್ಲಿ ಸಾಲಮನ್ನಾ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

1.03 ಕೋಟಿ ರೂ. ಸಾಲಮನ್ನಾ ವಿತರಣೆ
ರಬಕವಿ-ಬನಹಟ್ಟಿ,ಸೆ5: ನೇಕಾರರ ಸಂಕಷ್ಟಕ್ಕೆ ನೆರವಾಗಿ ರಾಜ್ಯ ಸರ್ಕಾರ ನೇತೃತ್ವದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ನೇಕಾರ ಕುಟುಂಬಕ್ಕೆ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಿಂದ ನೇಕಾರ ಸಮುದಾಯಕ್ಕೆ ಸಹಕಾರಿಯಾಗುವಲ್ಲಿ ಕಾರಣವಾಗಿದ್ದು, ಇದೀಗ ನೀಲಕಂಠೇಶ್ವರ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದಿಂದ 1.03 ಕೋಟಿ ರೂ. ಸಾಲಮನ್ನಾ ಚೆಕ್ ವಿತರಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಚಿಂಚಖಂಡಿ ಹೇಳಿದರು.

ಸ್ಥಳೀಯ ನೀಲಕಂಠೇಶ್ವರ ಮಠದ ಆವರಣದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಒಟ್ಟು 283 ಕುಟುಂಬಗಳಿಗೆ ಈ ಯೋಜನೆ ದೊರೆತಿದ್ದು ಸಂತಸವೆನಿಸುತ್ತಿದೆ ಎಂದರು. ಈ ಯೋಜನೆಯಿಂದ ನೇಕಾರಿಕೆ ಕುಟುಂಬಕ್ಕೆ ಆಸರೆಯಾಗುವದಷ್ಟೇ ಅಲ್ಲದೆ ನೇಯ್ಗೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. 
ಇದೇ ಸಂದರ್ಭ ದುಂಡಪ್ಪ ಮಾಚಕನೂ, ಶ್ರೀಶೈಲ ಆಸಂಗಿ, ಸುರೇಶ ವಜ್ಜರಮಟ್ಟಿ, ಸುರೇಶ ಒಂಟಗೂಡಿ, ಮಹಾಲಿಂಗ ಹಾದಿಮನಿ, ಮಹಾದೇವ ಬಾಡಗಂಡಿ, ಪ್ರಕಾಶ ಆಸಂಗಿ ಸೇರಿದಂತೆ ಅನೇಕರಿದ್ದರು.