ಭಾರಿ ಮಳೆ, ಮನೆಗೆ ನುಗ್ಗಿದ ನೀರು
ರಬಕವಿ-ಬನಹಟ್ಟಿ,ಸೆ26: ಶುಕ್ರವಾರ ರಾತ್ರಿ ಹಾಗು ಶನಿವಾರ ಬೆಳಿಗ್ಗೆ ನಿರಂತರ ಏಳೆಂಟು ಗಂಟೆಗಳ ಕಾಲ ಸುರಿದ ಮಳೆಗೆ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದವು. ರಬಕವಿ-ಬನಹಟ್ಟಿ-ರಾಮಪೂರ-ಹೊಸೂರ ನಗರಸಭೆ ವಿವಿಧ ಬಡಾಣೆಯೊಳಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ರಬಕವಿಯ ವಿದ್ಯಾನಗರ, ಮಾರುಕಟ್ಟೆ, ಬನಹಟ್ಟಿಯ ವೀರಭದ್ರದೇವರ ದೇವಸ್ಥಾನ, ಮಂಗಳವಾರ ಪೇಟೆ, ಸೋಮವಾರ ಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರಿ ನೀರು ನುಗ್ಗಿದ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಹಲವಾರು ಮನೆಗಳಿಗೆ ನುಗ್ಗಿ ನಿವಾಸಿಗಳನ್ನು ಪರದಾಡುವಂತೆ ಮಡಿದೆ.
ಭಾರಿ ಮಳೆಯಿಂದ ರಸ್ತೆ ಮೇಲೆ ನೀರು ಹರಿದರೆ, ಮಣ್ಣಿನ ಮನೆಗಳು ಸೋರುತ್ತಿದ್ದುದರಿಂದ ಮಾಳಿಗೆ ಮೇಲೆ ಹತ್ತಿ ಸೋರಿಕೆ ತಡೆಯಲು ಜನರು ಹರಸಾಹಸ ಪಡುವಂತಾಯಿತು. ಕೆಲ ವ್ಯಾಪಾರಿಕಾರರ ಅಂಗಡಿಗಳು ಸೋರಿ ಕೆಲವಡೆ ಹಾನಿ ಸಂಭವಿಸಿದ್ದರೆ, ಮುಖ್ಯ ಮಾರುಕಟ್ಟೆಯಾದ ಸೀರೆ ಅಂಗಡಿಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿ ಹಾನಿ ಸಂಭವಿಸಿದೆ.

Social Plugin