ಬನಹಟ್ಟಿಯ ಹಿರೇಮಠದಲ್ಲಿ ಗಂಗಾಧರ ಸ್ವಾಮಿಗಳ ಹಾಗೂ ಮೃತ್ಯುಂಜಯ ಸ್ವಾಮಿಗಳ ಪುಣ್ಯಾರಾಧನೆ ಜರುಗಿತು.
ಗುರುವಿನ ನಾಮಸ್ಮರಣೆಯಿಂದ ಎಲ್ಲವೂ ಸಾಧ್ಯ
ರಬಕವಿ-ಬನಹಟ್ಟಿ,ಸೆ16: ಗುರುವಿನ ಮಹಿಮೆ ಅಪಾರವಾದುದು, ಸದಾ ನಾಮಸ್ಮರಣೆಯಿಂದ ಎಲ್ಲವೂ ಸಾಧ್ಯವೆಂದು ವೇದಮೂರ್ತಿ ಮಹಾಂತಯ್ಯ ಹಿರೇಮಠ ಹೇಳಿದರು.
ಅವರು ಬನಹಟ್ಟಿಯ ಸೋಮವಾರ ಪೇಟದ ಶರಣರ ಬಾವಿ ಹತ್ತಿರವಿರುವ ಹಿರೇಮಠದಲ್ಲಿ ಗಂಗಾಧರ ಸ್ವಾಮಿಗಳ ಹಾಗೂ ಮೃತ್ಯುಂಜಯ ಸ್ವಾಮಿಗಳ ಪುಣ್ಯಾರಾಧನೆ ಪ್ರಯುಕ್ತ ಜರುಗಿದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗುರುವಿನ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಮಾಡುತ್ತಿರುವುದು ಸ್ತ್ಯುತ್ಯಾರ್ಹವಾದುದು ಎಂದರು. ಇದು ಇಷ್ಟಕ್ಕೆ ಸಿಮೀತಗೊಳಿಸದೆ ಈ ಪುಣ್ಯಾರಾಧನೆ ಒಂದು ದೊಡ್ಡ ಕಾರ್ಯಕ್ರಮವಾಗಿ ಪರಿವರ್ತಿಸಿ ಅನೇಕ ಶರಣರನ್ನು ಕರೆಸಿ ಗುರುವಿನ ಮಹಿಮೆಯ ಆಶೀರ್ವಚನ ಪಡೆಯಬೇಕು ಎಂದರು.
ಭಕ್ತಿ-ಭಾವಗಳೊಂದಿಗೆ ನಿತ್ಯ ಗುರು-ಶಿಷ್ಯರನ್ನು ಒಂದು ಮಾಡುವ ನಿತ್ಯ ಕಾಯಕ ಮಠಗಳದ್ದಾಗಿವೆ. ಸನ್ಮಾರ್ಗದೊಂದಿಗೆ ನೆಮ್ಮದಿಯ ಬದುಕು ಕಾಣಲು ಮಠ-ಮಾನ್ಯಗಳಿಗೆ ತೆರಳಿ ಮಾನಸಿಕ ಒತ್ತಡಗಳಿಂದ ದೂರ ಉಳಿಯಲು ಸಾಧ್ಯವೆಂದು ಡಾ. ಮಲ್ಲಣ್ಣ ಬಾವಲತ್ತಿ ಹೇಳಿದರು.
ಸಿದ್ದಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸುರೇಶ ಗಣೇಶನವರ, ಮಹಾಶಾಂತ ಶೆಟ್ಟರ, ಶಿವಾನಂದ ಬಾಗೇವಾಡಿ, ಅಶೋಕ ಹಟ್ಟಿ, ರವಿ ಸಂಪಗಾಂವಿ, ಚನ್ನಪ್ಪ ಗುಣಕಿ, ಪ್ರಸನ್ನ ಬಾಣಕಾರ, ಸೋಮವಾರ ಪೇಟ ದೈವ ಮಂಡಳಿ, ರೈತರ ಮತ್ತು ಗೌಡರ ದೈವ ಮಂಡಳಿ, ಆದಿ ಬಣಜಿಗ ಸಮಾಜ ಬಾಂಧವರ ಹಿರಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Social Plugin